ನೆಲ್ಯಾಡಿ : ನಾಳೆ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಜೋಡಣೆ ಕಾರ್ಯಕ್ರಮ

ಶೇರ್ ಮಾಡಿ

ನೇಸರ ಜೂ. 17: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಮತ್ತು ಅಂಚೆ ಕಚೇರಿ ಪುತ್ತೂರು ಇದರ ಸಹಯೋಗದಲ್ಲಿ ದಿನಾಂಕ 18-06-2022 ನೇ ಶನಿವಾರ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಠಾರದಲ್ಲಿ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಜೋಡಣೆ ಕಾರ್ಯಕ್ರಮ ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ನಡೆಯಲಿದೆ.

ವಿಶೇಷ ಸೂಚನೆ:
ಸಾರ್ವಜನಿಕರು ಮೂಲ ಆಧಾರ್ ಕಾರ್ಡ್ ಮತ್ತು ಮೊಬೈಲ್ ಫೋನ್ ಕಡ್ಡಾಯವಾಗಿ ತರತಕ್ಕದ್ದು. ಬೆರಳಚ್ಚು ನೀಡಲು ಇರುವುದರಿಂದ ಫಲಾನುಭವಿಗಳೇ ಹಾಜರಿರಬೇಕು. ಪಾವತಿಸಬೇಕಾದ ಶುಲ್ಕ 50ರೂ.

ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!