Category: ಕರ್ನಾಟಕ

  • ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ನಾಮಪತ್ರ ಸಲ್ಲಿಕೆ

    ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ನಾಮಪತ್ರ ಸಲ್ಲಿಕೆ

    ಬೆಂಗಳೂರು: ವಿಧಾನಸಭಾ ಸ್ಪೀಕರ್ ಹುದ್ದೆ ನೇಮಕಾತಿ ಹಿನ್ನೆಲೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್ ನಾಮಪತ್ರ ಸಲ್ಲಿಕೆ ಮಾಡಿದರು. ಮಂಗಳವಾರ ವಿಧಾನಸಭೆ ಕಾರ್ಯದರ್ಶಿ ಅವರ ಕೊಠಡಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಖಾನ್‌ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಬುಧವಾರ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅವಿರೋಧವಾಗಿ ಯು.ಟಿ‌ ಖಾದರ್ ಅವರನ್ನು ಆಯ್ಕೆ ಮಾಡಲಾಗುತ್ತದೆ. ನಾಳೆ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಯು.ಟಿ ಖಾದರ್ ಅವರು ಮಂಗಳೂರು…

  • ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಣ ಬಿಡುಗಡೆ/ಪಾವತಿಗಳನ್ನು ತಡೆ ಹಿಡಿಯಲು ರಾಜ್ಯ ಸರ್ಕಾರದ ಆದೇಶ

    ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಣ ಬಿಡುಗಡೆ/ಪಾವತಿಗಳನ್ನು ತಡೆ ಹಿಡಿಯಲು ರಾಜ್ಯ ಸರ್ಕಾರದ ಆದೇಶ

    ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡಿದ್ದ ಎಲ್ಲ ಇಲಾಖೆಗಳ ಕಾಮಗಾರಿಗಳಿಗೆ ತಡೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಇಲಾಖೆಗಳ ಅಧೀನಕ್ಕೊಳಪಡುವ ನಿಗಮ ಮಂಡಳಿ/ಪ್ರಾಧಿಕಾರಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಎಲ್ಲ ಮುಂದಿನ ಹಣ ಬಿಡುಗಡೆ/ಪಾವತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆ ಹಿಡಿಯಲು ಹಾಗೂ ಪ್ರಾರಂಭವಾಗದಿರುವ ಎಲ್ಲಾ ಕಾಮಗಾರಿಗಳನ್ನು ಸಹ ತಡೆ ಹಿಡಿಯಲು ಆದೇಶದಲ್ಲಿ ತಿಳಿಸಲಾಗಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಏಕ ರೂಪ್ ಕೌರ್ ಅವರು ಆದೇಶ ಹೊರಡಿಸಿದ್ದು, ಮುಖ್ಯಮಂತ್ರಿಗಳ ನಿರ್ದೇಶನದಂತೆ, ಈ ಹಿಂದಿನ ಸರ್ಕಾರ ಕೈಗೊಂಡಿದ್ದ ಎಲ್ಲಾ…

  • ಗೋಮೂತ್ರದಿಂದ ವಿಧಾನಸೌಧದ ದ್ವಾರ ಶುದ್ಧೀಕರಣಗೊಳಿಸಿದ ಕಾಂಗ್ರೆಸ್ ಮುಖಂಡರು

    ಗೋಮೂತ್ರದಿಂದ ವಿಧಾನಸೌಧದ ದ್ವಾರ ಶುದ್ಧೀಕರಣಗೊಳಿಸಿದ ಕಾಂಗ್ರೆಸ್ ಮುಖಂಡರು

    ಬೆಂಗಳೂರು : ವಿಧಾನಸೌಧ ಮುಂಭಾಗ ಹೈಕೋರ್ಟ್ ಎದುರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ರಸ್ತೆಗೆ ಗೋಮೂತ್ರ ಸಿಂಪಡನೆ ಮಾಡಿದರು.ಭ್ರಷ್ಟ 40% ಬಿಜೆಪಿ ಸರ್ಕಾರದ ದುರಾಡಳಿತ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಹಸುವಿನ ಗಂಜಲದ (ಗೋಮೂತ್ರದಿಂದ) ಮೂಲಕ ವಿಧಾನಸೌಧದ ದ್ವಾರ ಬಾಗಿಲಿನಲ್ಲಿ ಶುದ್ಧೀಕರಣ ಮಾಡಿ ಹಾಗೂ ಪೂಜೆಯನ್ನು ನೆರವೇರಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಹಿಂದಿನ ಭ್ರಷ್ಟ ಬಿಜೆಪಿ ಸರ್ಕಾರ ರಾಜ್ಯದಿಂದ ತೊಲಗಿ ಶುದ್ಧ ಆಡಳಿತ ನಡೆಸಲು ಕಾಂಗ್ರೆಸ್ ಪಕ್ಷಕ್ಕೆ ಜನ ಸ್ಪಷ್ಟ ಬಹುಮತ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆಯ ಒಳಿತಿಗಾಗಿ…

  • ಅಂಚೆ ಇಲಾಖೆಯಲ್ಲಿ 12,828 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಅಂಚೆ ಇಲಾಖೆಯಲ್ಲಿ 12,828 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಭಾರತೀಯ ಅಂಚೆ ಇಲಾಖೆ 12,828 ಗ್ರಾಮೀಣ ಡಾಕ್ ಸೇವಕರ್ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಬ್ರ್ಯಾಂಚ್‌ ಪೋಸ್ಟ್ ಮಾಸ್ಟರ್, ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರನ್ನು ಅವರ ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ. ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗಿದೆ.ಉದ್ಯೋಗ ಇಲಾಖೆ – ಭಾರತೀಯ ಅಂಚೆ…

  • ನದಿ ನೀರಿಗೆ ವಿಷಪ್ರಾಶನ – ಮೀನುಗಳ ಮಾರಣ ಹೋಮ

    ನದಿ ನೀರಿಗೆ ವಿಷಪ್ರಾಶನ – ಮೀನುಗಳ ಮಾರಣ ಹೋಮ

    ಕಾರ್ಕಳ: ಮಲೆಬೆಟ್ಟು ಮತ್ತು ಕೆರ್ವಾಶೆಯ ನಡುವೆ ಹರಿಯುವ ‘ಸ್ವರ್ಣ ನದಿಯ ಬಾಂಕ ಗುಂಡಿ’ಯಲ್ಲಿ ಯಾರೋ ದುಷ್ಕರ್ಮಿಗಳು ಭಾನುವಾರ ರಾತ್ರಿ, ನೀರಿಗೆ “ವಿಷಪ್ರಾಶನ” ಮಾಡಿ ನೀರನ್ನೂ ಕಲುಷಿತಗೊಳಿಸಿದ್ದಾರೆ. ದಿನನಿತ್ಯ ಕುಡಿಯಲು ಬಳಸುವ ನೀರಿಗೆ “ಗೇರುಬೀಜ ಎಣ್ಣೆ” ಇಲ್ಲವೇ ಯಾವುದೋ “ಕೀಟನಾಶಕ” ಹಾಕಿರುವ ಶಂಕೆ ಇದ್ದು ಇದರಿಂದ ಯಥೇಚ್ಛವಾಗಿ ಮೀನುಗಳ ಮಾರಣ ಹೋಮವಾಗಿದೆ.ಕುಡಿಯುವ ನೀರಿಗೆ ಬರ ಇರುವ ಈ ಸಮಯದಲ್ಲಿ ದಿನನಿತ್ಯದ ಬಳಕೆಗೆ ಆಧಾರವಾಗಿದ್ದ ನೀರಿನ ಮೂಲಕ್ಕೆ ವಿಷ ಪ್ರಾಶನ ಮಾಡಿರುವುದಕ್ಕೆ ಗ್ರಾಮಸ್ಥರು ಆಕ್ರೋಶಿತರಾಗಿದ್ದಾರೆ.

  • ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ದಟ್ಟಣೆ; ಟ್ರಾಫಿಕ್‌ ಜಾಮ್

    ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ದಟ್ಟಣೆ; ಟ್ರಾಫಿಕ್‌ ಜಾಮ್

    ಬೆಳ್ತಂಗಡಿ: ಬೇಸಗೆ ರಜೆಯಾದ್ದರಿಂದ ಜಿಲ್ಲೆಯ ಪ್ರವಾಸಿ ಕೇಂದ್ರ ಸಂದರ್ಶಿಸಲು ಇತರೆಡೆಗಳಿಂದ ಪ್ರವಾಸಿಗರು ಬರುತ್ತಿರುವುದರಿಂದ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಈ ಮಧ್ಯೆ ರವಿವಾರ ಸಂಜೆ ಚಾರ್ಮಾಡಿ ಘಾಟಿಯ 7ನೇ ತಿರುವಿನಲ್ಲಿ ಅರುಣಾಚಲ ಪ್ರದೇಶ ನೋಂದಣಿಯ ಸ್ಲಿàಪರ್‌ ಬಸ್‌ ಸಿಲುಕಿದ ಕಾರಣ ವಾಹನಗಳು ಕಿ.ಮೀ. ಗಟ್ಟಲೆ ದೂರಕ್ಕೆ ಸಾಲಿನಲ್ಲಿ ನಿಲ್ಲಬೇಕಾಯಿತು. ಚಿಕ್ಕಮಗಳೂರಿನ ಬೈಕ್‌ ಸವಾರ ವಿದ್ಯಾರ್ಥಿ ಡೇನಿಯಲ್‌ ಹಾಗೂ ಕೆಲವು ವಾಹನ ಸವಾರರು ಸೇರಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಚಾರ್ಮಾಡಿಯಲ್ಲಿ ಘನವಾಹನ ಸಹಿತ ಸ್ಲಿಪರ್‌…

  • ಕಂಬಳ ಪರ ಸುಪ್ರೀಂ ಕೋರ್ಟ್ ತೀರ್ಪು; 12 ವರ್ಷಗಳ ಹೋರಾಟಕ್ಕೆ ಸಂದ ಜಯ: ಅಶೋಕ್‌ ಕುಮಾರ್ ರೈ

    ಕಂಬಳ ಪರ ಸುಪ್ರೀಂ ಕೋರ್ಟ್ ತೀರ್ಪು; 12 ವರ್ಷಗಳ ಹೋರಾಟಕ್ಕೆ ಸಂದ ಜಯ: ಅಶೋಕ್‌ ಕುಮಾರ್ ರೈ

    ಪುತ್ತೂರು: ಕಂಬಳ ಪರ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಉಪ್ಪಿನಂಗಡಿ ವಿಜಯವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರಾದ ಪ್ರಸ್ತುತ ಶಾಸಕರಾಗಿರುವ ಅಶೋಕ್ ಕುಮಾರ್ ರೈ ಅವರು ಸುದೀರ್ಘ 12 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ. ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದಿಂದ ಈ ಕ್ರೀಡೆ ನಡೆಯುತ್ತಿತ್ತು. ಹೆಚ್ಚಾಗಿ ನವೆಂಬರ್ ಬಳಿಕ ಮಾರ್ಚ್ ತನಕ ಕರಾವಳಿ ಜಿಲ್ಲೆಗಳಲ್ಲಿ ಈ ಕ್ರೀಡೆ ನಡೆಯುತ್ತದೆ. ಕಂಬಳದಲ್ಲಿ ಎರಡು ಬಲಿಷ್ಟ ಕೋಣಗಳ ಕುತ್ತಿಗೆಗೆ…

  • ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ

    ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ

    ಬೆಂಗಳೂರು: ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಸಿಎಂ ಆಯ್ಕೆ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದು, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎ.ಎನ್.ಐ ಮೂಲಗಳು ತಿಳಿಸಿದೆ. ಆ ಮೂಲಕ ಸಿದ್ದರಾಮಯ್ಯ ಅವರಿಗೆ 2ನೇ ಬಾರಿಗೆ ಮುಖ್ಯಮಂತ್ರಿ ಪಟ್ಟ ಲಭಿಸಿದೆ. ಮೇ.18ರ ಗುರುವಾರ ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ. ಈ ಬಗ್ಗೆ ಮೇ.17ರ…

  • ಅರಸಿನಮಕ್ಕಿ: ತ್ಯಾಜ್ಯ ವಿಲೇವಾರಿ ವಾಹನದಲ್ಲಿ ತೋಡಿಗೆ ಕಸ ಸುರಿಯಲಾಗಿದೆ ಎಂಬ ಆರೋಪ; ಗ್ರಾಮಸ್ಥರ ಪ್ರತಿಭಟನೆ; ಸ್ಥಳಕ್ಕೆ ಅಧಿಕಾರಿಗಳ ಭೇಟಿ

    ಅರಸಿನಮಕ್ಕಿ: ತ್ಯಾಜ್ಯ ವಿಲೇವಾರಿ ವಾಹನದಲ್ಲಿ ತೋಡಿಗೆ ಕಸ ಸುರಿಯಲಾಗಿದೆ ಎಂಬ ಆರೋಪ; ಗ್ರಾಮಸ್ಥರ ಪ್ರತಿಭಟನೆ; ಸ್ಥಳಕ್ಕೆ ಅಧಿಕಾರಿಗಳ ಭೇಟಿ

    ಅರಸಿನಮಕ್ಕಿ: ಅರಸಿನಮಕ್ಕಿ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಒಳಪಟ್ಟ ರೆಖ್ಯ ಗ್ರಾಮದ ಪೆಂಚಾರು ಹರಿಯುವ ತೋಡಿನ ಬಳಿ ಅರಸಿನಮಕ್ಕಿ ಪೇಟೆಯ ತ್ಯಾಜ್ಯವನ್ನು ಪಂಚಾಯತ್‌ ನ ಘನ ತ್ಯಾಜ್ಯ ಘಟಕದ ವಿಲೇವಾರಿ ವಾಹನದಲ್ಲಿ ಎಸೆಯುತ್ತಿದ್ದಾಗ ಗ್ರಾಮಸ್ಥರು ತಡೆ ಹಿಡಿದು ಧರಣಿ ನಡೆಸಿದ ಘಟನೆ ಮೇ.16 ರಂದು ನಡೆದಿದೆ. ಈ ಪ್ರದೇಶದಲ್ಲಿ ಪ್ರತೀ ವರ್ಷವೂ ತ್ಯಾಜ್ಯವನ್ನು ಎಸೆಯಲಾಗುತ್ತಿತ್ತು. ರಾತ್ರಿ ವೇಳೆ ಬಂದು ಎಸೆದು ಹೋಗುತ್ತಿದ್ದರೂ, ಕಾದು ಕುಳಿತಿದ್ದರೂ ಸಿಗುತ್ತಿರಲಿಲ್ಲ. ಸುಮಾರು 30ರಿಂದ 40 ಲೋಡ್‌ ತ್ಯಾಜ್ಯ ಎಸೆಯಲಾಗಿದೆ. ಅರಣ್ಯ ಇಲಾಖೆ ತ್ಯಾಜ್ಯ…

  • ಚಾರ್ಮಾಡಿ ಘಾಟಿಯಲ್ಲಿ ಭಯ ಹುಟ್ಟಿಸಿದ ಒಂಟಿ ಸಲಗ: ಕೆಲ ಹೊತ್ತು ಟ್ರಾಫಿಕ್ ಜಾಮ್

    ಚಾರ್ಮಾಡಿ ಘಾಟಿಯಲ್ಲಿ ಭಯ ಹುಟ್ಟಿಸಿದ ಒಂಟಿ ಸಲಗ: ಕೆಲ ಹೊತ್ತು ಟ್ರಾಫಿಕ್ ಜಾಮ್

    ಚಾರ್ಮಾಡಿ: ಕೊಟ್ಟಿಗೆಹಾರದಿಂದ ಮಂಗಳೂರು ಹೋಗುವ ಮಾರ್ಗ ಮಧ್ಯೆ ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಬುಧವಾರ ಸಂಜೆ ಒಂಟಿ ಸಲಗವೊಂದು ರಸ್ತೆಯಲ್ಲಿಯೇ ನಿಂತು ಪ್ರಯಾಣಿಕರಿಗೆ, ವಾಹನ ಸವಾರರಿಗೆ ಭಯ ಸೃಷ್ಟಿ ಮಾಡಿದೆ. ಸಂಜೆ 4.30 ಗಂಟೆ ಸಮಯದಲ್ಲಿ ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಕಾಡಾನೆಯೊಂದು ರಸ್ತೆಗೆ ಪ್ರವೇಶಿಸಿದೆ ಈ ವೇಳೆ ಈ ಮಾರ್ಗದಲ್ಲಿ ಬರುತ್ತಿದ್ದ ಮಂಗಳೂರು ಹಾಸನ ಸರ್ಕಾರಿ ಬಸ್ ಚಾಲಕ ಆನೆಯನ್ನು ಗಮನಿಸಿ ಕೊಂಚ ದೂರದಲ್ಲಿ ಬಸ್ಸನ್ನು ನಿಲ್ಲಿಸಿದ್ದಾನೆ. ಕೆಲ ಸಮಯದ ಬಳಿಕ ರಸ್ತೆಯಲ್ಲಿದ್ದ ಆನೆ ರಸ್ತೆಯ…

error: Content is protected !!