ಕಡಬದ ನವದುರ್ಗ ಟೆಕ್ಸ್ ಟೈಲ್ಸ್ ನ ಮೇದಪ್ಪ ಗೌಡ ಮುಳಿಯರಿಂದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ

ಶೇರ್ ಮಾಡಿ

ನೇಸರ ಜು.03: ಕಡಬದ ನವದುರ್ಗ ಟೆಕ್ಸ್ ಟೈಲ್ಸ್ ನ ಮಾಲಕರಾದ ಮೇದಪ್ಪ ಗೌಡ ಮುಳಿಯ ರವರು ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಶೈಕ್ಷಣಿಕ ವರ್ಷ 2022-23ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 45,000 ರೂ. ಮೌಲ್ಯದ ಸಮವಸ್ತ್ರ ಬಟ್ಟೆಯನ್ನು ಉಚಿತವಾಗಿ ನೀಡಿದರು.
ಈ ಸಂದರ್ಭ ಶ್ರೀರಾಮ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ದೇರಾಜೆ, ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್, ನವದುರ್ಗ ಟೆಕ್ಸ್ ಟೈಲ್ಸ್ ಮಾಲಕರಾದ ಮೇದಪ್ಪ ಗೌಡ ಮುಳಿಯ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!