ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ರಕ್ತವರ್ಗೀಕರಣ

ಶೇರ್ ಮಾಡಿ

ನೇಸರ ಜು.03: ಸಂತ ತೋಮಸರ ದಿನಾಚರಣೆ ಸ್ಮರಣಾರ್ಥ ಸೈಂಟ್ ಮೇರಿಸ್ ಆರ್ಥೋಡಕ್ಸ್ ಸಿರಿಯಲ್ ಚರ್ಚ್ ಸಂಪ್ಯಾಡಿ ಇದರ ಸಾರಥ್ಯದಲ್ಲಿ ನಾಡೋಳಿ ಡಯೋಗ್ನೋಸ್ಟಿಕ್ ಸೆಂಟರ್ ನೆಲ್ಯಾಡಿ ಹಾಗೂ ಜೇಸಿಐ ನೆಲ್ಯಾಡಿ ಇದರ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ(ಕಡಬ ಘಟಕ) ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ರಕ್ತವರ್ಗೀಕರಣ ಕಾರ್ಯಕ್ರಮ ಸೈಂಟ್ ಮೇರೀಸ್ ಚರ್ಚ್ ಸಂಪ್ಯಾಡಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸದಾಶಿವ ಭಟ್, ನಿವೃತ್ತ ವಲಯ ಅರಣ್ಯ ಸ೦ರಕ್ಷಣಾಧಿಕಾರಿ ಹಾಗು ರೆಡ್‌ಕ್ರಾಸ್ ಸಂಸ್ಥೆ ಕಡಬ ಇದರ ಚೇರ್ ಮನ್ ದೀಪ ಬೆಳಗಿಸಿ ಉದ್ಧಾಟಿಸಿ ಮಾತನಾಡಿ ರಕ್ತದಾನವು ಎಲ್ಲಾ ದಾನಕ್ಕಿಂತಲೂ ಶ್ರೇಷ್ಠ ದಾನ ಹಾಗು ಸಂಪ್ಯಾಡಿ ಯಂತಹ ಗ್ರಾಮೀಣ ಭಾಗದಲ್ಲಿ ಇಷ್ಟು ಸಂಖ್ಯೆಯ ಯುವಕ-ಯುವತಿಯರು ರಕ್ತದಾನಕ್ಕೆ ಉತ್ಸಾಹ ತೋರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎ೦ದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚ್ ನ ವಿಕಾರ್ ರೆ.ಫಾ.ಝಕಾರಿಯಾ ಮ್ಯಾಥ್ಯೂ ವಹಿಸಿ ಮಾತನಾಡಿ ಚರ್ಚಿನಲ್ಲಿ ಎಲ್ಲಾ ಜಾತಿ, ಧರ್ಮ, ಮತ ಪಂಗಡ ಬೇಧಭಾವವಿಲ್ಲದೇ ಅನೇಕ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದು, ಈಗಾಗಲೇ ಚರ್ಚಿನ ಚಾರಿಟಿ ಫಂಡ್ ಮೂಲಕ ನೂರಾರು ಬಡ ರೋಗಿಗಳಿಗೆ ಪ್ರತಿ ವರ್ಷ ಆರ್ಥಿಕ ಸಹಾಯವನ್ನು ನೀಡುತ್ತಾ ಬಂದಿದೇವೆ. ಈಗ ರಕ್ತದಾನ ಶಿಬಿರದ ಮೂಲಕ ಮತ್ತೊಂದು ಸಾಮಾಜಿಕ ಕಾರ್ಯಕ್ಕೆ ಮುಹೂರ್ತವನ್ನು ಇಟ್ಟಿದ್ದೇವೆ ಈ ಕಾರ್ಯಕ್ರಮಕ್ಕೆ ಕಾರಣಕರ್ತರಾದ ಎಲ್ಲರನ್ನು ಅಭಿನಂದಿಸುದಾಗಿ ತಿಳಿಸಿದರು.
ವೇದಿಕೆಯಲ್ಲಿ ಕಾಶಿನಾಥ್ ಗೋಗಟೆ, ನಾಡೋಳಿ ಡಯೋಗ್ನೋಸ್ಟಿಕ್ ಸೆಂಟರ್ ನೆಲ್ಯಾಡಿ ಇದರ ಮಾಲಕರು ಹಾಗೂ ನೆಲ್ಯಾಡಿ ಜೇಸಿಐ ಅಧ್ಯಕ್ಷರಾದ ಶ್ರೀಮತಿ ಜಯಂತಿ ಉಪಸ್ಥಿತರಿದ್ದು ಸಂದಬೋಚಿತವಾಗಿ ಮಾತನಾಡಿದರು. ಚರ್ಚಿನ ಸದಸ್ಯರಾದ ವರ್ಗೀಸ್
ಎನ್ ಟಿ., ಶುಭಾಶಯದ ಮಾತುಗಳನ್ನಾಡಿದರು. ಚರ್ಚಿನ ಆಡಳಿತ ಮಂಡಳಿ ಸದಸ್ಯರು ಹಾಗು CYM ಸಂಘಟನೆ ಕಾರ್ಯದರ್ಶಿ ಶೈಜು ಟಿ ಯು., ಖಜಾಂಚಿ ಸಚಿನ್ ವಿ ಎಸ್., ಉಪಸ್ಥಿತರಿದ್ದರು. ಸಂಡೇ ಸ್ಕೂಲ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜಾರ್ಜ್ ಟಿ.ಎಸ್., ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಶೈಲೇಶ್ ಸ್ವಾಗತಿಸಿ. ಸಚಿನ್ ವಂದಿಸಿದರು.
ಡಾ.ಸಾಹಿರಾ ರಕ್ತ ಸಂಗ್ರಹದ ಕಾರ್ಯವನ್ನು ನೆರವೇರಿಸಿದರು. ಸುಮಾರು 60ಕ್ಕೂ ಹೆಚ್ಚು ಜನರಿಂದ ರಕ್ತ ಸಂಗ್ರಹಿಸಲಾಯಿತು. 100 ಕ್ಕೂ ಹೆಚ್ಚು ಜನರ ರಕ್ತವರ್ಗೀಕರಣ ಮಾಡಲಾಯಿತು.

Leave a Reply

error: Content is protected !!