ಆಮ್ ಆದ್ಮಿ ಪಕ್ಷ ದ.ಕ ಹಾಗೂ ಯೆನೆಪೋಯ ವೈದ್ಯಕೀಯ ಮತ್ತು ದಂತ ಕಾಲೇಜು ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ

ಶೇರ್ ಮಾಡಿ

ನೇಸರ ಜು.03: ಮಂಗಳೂರು ಕೆಲರೈ ನೀರುಮಾರ್ಗ ಅಮೃತಲಾಲಾಜಿ ಶಾಲೆಯಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಯೆನೆಪೋಯ ವೈದ್ಯಕೀಯ ಮತ್ತು ದಂತ ಕಾಲೇಜು ಸಹಯೋಗದಲ್ಲಿ ಪ್ರಥಮ ಉಚಿತ ವೈದ್ಯಕೀಯ ಶಿಬಿರ ಜು.3 ರಂದು ನಡೆಯಿತು.

ಜನರಲ್ ಮೆಡಿಸಿನ್, ಹಲ್ಲಿನ ಚಿಕಿತ್ಸೆ, ನೇತ್ರ ತಪಾಸಣೆ, ಮೂಳೆ ಚಿಕಿತ್ಸೆ, ಆಂಕೊಲಾಜಿ (ಕ್ಯಾನ್ಸರ್ ತಪಾಸಣೆ), ಸ್ತ್ರೀರೋಗ ತಪಾಸಣೆ ವಿಭಾಗಗಳಲ್ಲಿ ಗ್ರಾಮೀಣ ಜನರ ಬಳಿಗೆ ಆರೋಗ್ಯ ಸೇವೆಗಳನ್ನು ಕೊಂಡುಹೋಗುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಿದೆ ಎಂದು ದಕ್ಷಿಣ ಕನ್ನಡ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯ್ಷರಾದ ಸಂತೋಷ್ ಕಾಮತ್ ಹೇಳಿದ್ದಾರೆ.

ಯೆನೆಪೋಯ ವೈದ್ಯಕೀಯ ಕಾಲೇಜು ಸಮುದಾಯ ಕ್ಯಾನ್ಸರ್ ತಜ್ಞ ವೈದ್ಯರಾದ ಡಾ. ಇಬ್ರಾಹಿಂ ನಾಗನೂರು, ಅಮೃತಲಾಲಾಜಿ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಡಿಸೋಜಾ, ಆಮ್ ಆದ್ಮಿ ಕರಾವಳಿ ವಲಯ ಅಧ್ಯಕ್ಷ ಜಯಪ್ರಕಾಶ್ ರಾವ್, ಆಮ್ ಆದ್ಮಿ ದಕ್ಷಿಣ ಕನ್ನಡ ಜಂಟಿ ಕಾರ್ಯದರ್ಶಿ ದಿಲೀಪ್ ಲೋಬೊ, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರು ಬಿ.ನವೀನ್ ಚಂದ್ರ ಪೂಜಾರಿ ಹಾಗೂ ನಿರುಮಾರ್ಗದ ಸ್ಥಳೀಯ ಮುಖಂಡ ನವೀನ್ ಡಿಸೋಜ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸ್ಥಳೀಯರು ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸುಮಾರು 250 ಮಂದಿ ಶಿಬಿರದ ಉಪಯೋಗ ಪಡೆದರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!