ನೇಸರ ಜು.19: ಕೆ ಎಸ್ ಎಸ್ ಮಹಾವಿದ್ಯಾಲಯ ಸುಬ್ರಹ್ಮಣ್ಯದ ಸಂಸ್ಕೃತ ವಿಭಾಗ ಮತ್ತು ಮೂಡಬಿದ್ರೆ ಆಳ್ವಾಸ್ ಮಹಾ ವಿದ್ಯಾಲಯದ ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಒಂದು ದಿನದ ಎಂ.ಓ.ಯು ಗೆ ಸಂಬಂಧಿಸಿದ ಚಟುವಟಿಕೆ ಹಾಗೂ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು.
ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದಿಂದ ಇಪ್ಪತ್ತು ವಿದ್ಯಾರ್ಥಿಗಳು ಆಗಮಿಸಿ ಕೆ.ಎಸ್.ಎಸ್ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಸುಮಾರು 60 ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಉದ್ಘಾಟಿಸಿದರು ಕಾಲೇಜಿನ ಪ್ರಾಚಾರ್ಯರಾದ ಡಾ. ದಿನೇಶ್ ಪಿ ಟಿ, ಅಬ್ಯಾಗತರಾಗಿ ಆಳ್ವಾಸ್ ಮಹಾವಿದ್ಯಾಲಯದ ಸಂಸ್ಕೃತ ಉಪನ್ಯಾಸಕರಾದ ಶ್ರೀಶ ಉಪಸ್ಥಿತರಿದ್ದರು.
ಕೆ ಎಸ್ ಎಸ್ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ರಾಮಪ್ರಸಾದ್ ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಚುಂಚನ ದ್ವಿತೀಯ ಬಿ.ಎ ಕಾರ್ಯಕ್ರಮ ನಿರೂಪಿಸಿದರು, ಶರಣ್ಯ, ಮೋಕ್ಷಿತ ಪ್ರಥಮ ಬಿ.ಕಾಂ ಪ್ರಾರ್ಥನೆಗೈದರು, ನಮಿತಾ ಪ್ರಥಮ ಬಿ.ಎ ವಂದಿಸಿದರು.