ನೇಸರ ನ 25 : ಗುಂಡ್ಯ ಶ್ರೀ ನಾರಾಯಣ ಗುರುಮಂದಿರದಲ್ಲಿ ವಿಪತ್ತು ನಿರ್ವಹಣಾ ಘಟಕದ ಸಮಾಲೋಚನೆ ಸಭೆಯನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ.ಪಾಯ್ಸ್ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಸ್ವ ಪ್ರೇರಣೆಯಿಂದ ವಿಪತ್ತು ನಿರ್ವಹಣಾ ತಂಡ ರಚನೆಗೆ ಮುಂದೆ ಬಂದ ಸ್ವಯಂಸೇವಕರ ಆಸಕ್ತಿಯನ್ನು ಶ್ಲಾಘಿಸಿದರು. ಗುಂಡ್ಯ ಹೊಳೆಯಲ್ಲಿ ಹೆಚ್ಚಿನ ವಿಪತ್ತುಗಳು ಸಂಭವಿಸುತ್ತಿವೆ.ರಸ್ತೆ ಅಪಘಾತಗಳು ಈಭಾಗದಲ್ಲಿ ಸಾಮಾನ್ಯವಾಗಿವೆ. ಆದುದರಿಂದ ಶೌರ್ಯ ತಂಡ ಇಲ್ಲಿ ಅತ್ಯಂತ ಅಗತ್ಯವಾಗಿದೆ ಎಂದರು.
ಯೋಜನಾಧಿಕಾರಿ ಮೇದಪ್ಪ.ಎನ್, ಮೇಲ್ವಿಚಾರಕ ವಿಜಯೇಶ್, ನಾರಾಯಣ ಗುರು ಮಂದಿರದ ಅಧ್ಯಕ್ಷರಾದ ಕಾರ್ತಿಕ್ ಎ.ಎನ್, ನೆಲ್ಯಾಡಿ ಗ್ರಾಮದ ಸುಭಾಷ್ ಉಪಸ್ಥಿತರಿದ್ದರು. 13 ಸ್ವಯಂಸೇವಕರು ಸಭೆಯಲ್ಲಿ ಭಾಗವಹಿಸಿದ್ದರು.