ನೇಸರ ಸೆ.16: ತಿರುಪತಿಯ ಸಂಸ್ಕೃತ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿರುವ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅಂತರ ನಿವಾಸಿ ಡಾ. ಶ್ರೀಪಾದ ಭಟ್ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಡೀನ್ ಆಗಿ ಆಯ್ಕೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಹೊಸ್ತೋಟ ಸರಕಾರಿ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಅರಸಿನಮಕ್ಕಿ ಹೈಸ್ಕೂಲ್ ನಲ್ಲಿ. ಶೃಂಗೇರಿ ಮಠದ ವೇದಪಾಠಶಾಲೆಯಲ್ಲಿ 2 ವರ್ಷ ವೇದಾಧ್ಯಯನ, ಉಡುಪಿ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಸ್ಕೃತ ವಿದ್ವತ್. ರಾತ್ರಿ ಕಾಲೇಜ್ ಗೆ ಸೇರಿ ಇಂಗ್ಲಿಷ್ ನಲ್ಲಿ ಎಂ ಎ ಪದವಿಯನ್ನು, ಮಧ್ಯಪ್ರದೇಶದ ಭೂಪಾಲ್ ನಲ್ಲಿ ಹಿಂದಿ ಪ್ರವೀಣ ಪದವಿ ಯನ್ನು. ಮಧ್ಯಪ್ರದೇಶದ ಭೋಪಾಲ್ ನಲ್ಲಿ ಹಿಂದೀ ಪ್ರವೀಣ ಪದವಿ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ಪಿ ಎಚ್ ಡಿ ಪದವಿ ಪಡೆದು. ಪೇಜಾವರ ಮಠದ ಶ್ರೀಪಾದರ ಆಪ್ತ ಸಚಿವರಾಗಿ ಸೇವೆ ಹಾಗೂ ಶ್ರೀಗಳ ಜೊತೆಗೆ ಭಾರತ ಭ್ರಮಣ ಮತ್ತು ಶಾಸ್ತ್ರ ಅಧ್ಯಯನ ಎರಡು ವರ್ಷ. ಉಡುಪಿ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಜ್ಯೋತಿಷ್ಯ ಉಪನ್ಯಾಸಕರಾಗಿ. ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ಉಪನ್ಯಾಸಕರಾಗಿ, ವಿಭಾಗ ಪ್ರಮುಖ ಸಂಕಾಯ ಪ್ರಮುಖ ಪರೀಕ್ಷಾ ನಿಯಂತ್ರಕರಾಗಿ ಸೇವೆ ಸಲ್ಲಿಸಿದ್ದಾರೆ. ರಷ್ಯಾದಲ್ಲಿ ನಡೆದ ಸಂಸ್ಕೃತ ವಿಜ್ಞಾನ ಪ್ರದರ್ಶಿನಿಯಲ್ಲಿ ವಿದ್ಯಾಪೀಠದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪರಿಯೋಜನೆಯನ್ನು ಪೂರ್ಣಗೊಳಿಸಿ ರುವ ಅವರು 10 ಪುಸ್ತಕ, 35ಕ್ಕೂ ಹೆಚ್ಚು ಹೋದ ಪತ್ರಗಳ ರಚನೆಕಾರರಾಗಿದ್ದಾರೆ. 30 ಕ್ಕೂ ಹೆಚ್ಚು ಸಂಶೋಧನೆ ಮಾಡುವ ವಿದ್ಯಾರ್ಥಿಯರಿಗೆ ಮಾರ್ಗದರ್ಶನ ನೀಡಿರುತ್ತಾರೆ.
ತಂದೆ ದಿ. ಗಣೇಶ್ ಭಟ್ ತಾಯಿ ದಿ. ಯಮುನಾ ಇವರ ಪುತ್ರ.