
ನೇಸರ ಸೆ.16: ಕಾರ್ಣಿಕದ ಕ್ಷೇತ್ರವಾಗಿ ಸಾವಿರಾರು ಭಕ್ತರನ್ನು ಆಕರ್ಷಸುತ್ತಿರುವ ಕೌಕ್ರಾಡಿ ಗ್ರಾಮದ ಪಟ್ಲಡ್ಕದ “ಕಾರ್ಣಿಕದ ಮಾಯಗಾರನೆಂದೇ ಜನಜನಿತವಾದ” ಕೊರಗಜ್ಜನನ್ನು ಹಾಡಿ ಸ್ತುತಿಸುವ ಪ್ರಸಾದ್ ಶೆಟ್ಟಿ ಮುಂಡಾಜೆ ನಿರ್ದೇಶನದ “ಪಟ್ಲಡ್ಕದ ಸ್ವಾಮಿ ಕೊರಗಜ್ಜ” ಧ್ವನಿ ಸುರುಳಿ ಬಿಡುಗಡೆ ಸೆ.17ರಂದು ಶ್ರೀ ಕ್ಷೇತ್ರ ಪಟ್ಲಡ್ಕದಲ್ಲಿ ನಡೆಯಲಿದೆ.
ಅಭಿನಯ ಕ್ರಿಯೇಷನ್ ನವರ ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿರುವ ಈ ಹಾಡಿಗೆ ಶ್ರೀಲತಾ ದಿನೇಶ್ ಗೌಡ ಸಾಹಿತ್ಯ ವಿದ್ದು, ಲತಾ ವಿಠ್ಠಲ ಗೌಡ ಧ್ವನಿ ನೀಡಿದ್ದಾರೆ. ರಿದಮ್ ಆಡಿಯೋ ಲ್ಯಾಬ್ ಉಜಿರೆ ಧ್ವನಿಗ್ರಹಣದೊಂದಿಗೆ, ಕೆ.ಬಿ. ರಾಜ್ ಪೋಸ್ಟರ್ ಡಿಸೈನ್ ಮಾಡಿರುತ್ತಾರೆ. ಸಂಪೂರ್ಣ ಸಹಕಾರ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ (ರಿ )ಪಟ್ಲಡ್ಕ ಕೊಕ್ಕಡ ನೀಡಿರುತ್ತಾರೆ.




