ಬಂದಾರು: ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.) ಇದರ ವತಿಯಿಂದ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಹಾಗೂ ಬಂದಾರು ಗ್ರಾಮ ಪಂಚಾಯತ್ ಗೆ ಅಭಿನಂದನಾ ಸಮಾರಂಭ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಂದಾರು ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಜನಾರ್ದನ ಗೌಡ ಪುಯಿಲ ನೇರವೇರಿಸಿದರು. ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ ಕೆಳೆಂಜಿಮಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಕಟ್ಟಡ ಅಭಿವೃದ್ಧಿಗೆ ಮತ್ತು ಅವರಣ ಗೋಡೆಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರು 5 ಲಕ್ಷ ಅನುದಾನ ಒದಗಿಸಿ ಸಂಘದ ರಸ್ತೆ ಕಾಂಕ್ರೀಟೀಕರಣಕ್ಕೆ ಬಂದಾರು ಗ್ರಾಮ ಪಂಚಾಯತ್ 1 ಲಕ್ಷ ಅನುದಾನ ನೀಡಿರುತ್ತಾರೆ. ಇವರನ್ನು ಸಂಘದ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ನಿವೃತ್ತ ಉಪವ್ಯವಸ್ಧಾಪಕರು ಶ್ರೀನಿವಾಸ ಎಂ. ಹಾಗೂ ಸಂಘದ ಕಾಮಗಾರಿಯನ್ನ ನಿರ್ವಹಿಸಿ ಕೊಟ್ಟ ಅಭಿಯಂತರರಾದ ಕೇಶವ ಅಂಗಡಿಮಜಲು, ವಿಸ್ತರಣಾಧಿಕಾರಿಯಾದ ರಾಜೇಶ್ ಕಾಮತ್ ಅವರನ್ನು ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ದ.ಕ.ಹಾಲು ಓಕ್ಕೂಟದ ಪಶು ವೈದ್ಯರಾದ ಜೀತೆಂದ್ರ ಪ್ರಸಾದ್, ಬಂದಾರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಕಾರಿಂಜ ಹಾಗೂ ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.) ಇದರ, ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿ ವರ್ಗ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.