ಜಾಗತಿಕ ಔಷಧ ಸಪ್ತಾಹ -ಕೊಕ್ಕಡದ ಔಷಧ ತಜ್ಞ ಬಿ.ಮೋಹನ್ ದಾಸ್ ಗೌಡರವರಿಗೆ ಸನ್ಮಾನ

ಶೇರ್ ಮಾಡಿ

ಮಂಗಳೂರು: ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್ ದ.ಕ ಜಿಲ್ಲಾ ಘಟಕ ಇವರ ಸಹಯೋಗದೊಂದಿಗೆ ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯವು ಮಂಗಳೂರಿನ ವಳಚ್ಚಿಲ್ ನಲ್ಲಿ ಸೆಪ್ಟಂಬರ್ 26ರಂದು ಜರಗಿದ ಜಾಗತಿಕ ಔಷಧ ಸಪ್ತಾಹದಲ್ಲಿ ಕೊಕ್ಕಡದ ಔಷದ ತಜ್ಞರಾದ ಬಿ ಮೋಹನ್ ದಾಸ್ ಗೌಡರವರು ಆರೋಗ್ಯ ಕ್ಷೇತ್ರದಲ್ಲಿ ಮೂರು ದಶಕದ ಅವಿರತ ಸಮಾಜಮುಖಿ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾದ ಪ್ರಮೋದ್ ಹೆಗ್ಡೆ ವ್ಯವಸ್ಥಾಪಕ ನಿರ್ದೇಶಕರು, ಮೆಡಾರ್ಗಾನಿಕ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಬೈಕಂಪಾಡಿ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ತಮ್ಮನ್ನು ಕೇವಲ ಒಂದು ಸೀಮಿತ ಶೈಕ್ಷಣಿಕ ವರ್ಗದಲ್ಲಿ ಅವಕಾಶಗಳನ್ನು ಹುಡುಕದೆ ಬೇರೆ ಕ್ಷೇತ್ರದಲ್ಲಿ ಇರುವ ಅವಕಾಶಗಳನ್ನು ಸದುಪಯೋಗ ಮಾಡಬೇಕು ಎಂದು ಕರೆಯಿತ್ತರು.
ಡಾ. ಸಿಎ.ಎ.ರಾಘವೇಂದ್ರರಾವ್, ಎ ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಚಾನ್ಸೆಲರ್, ಶ್ರೀನಿವಾಸ ಯುನಿವರ್ಸಿಟಿ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಫಾರ್ಮಸಿ ಕ್ಷೇತ್ರವು ಆರೋಗ್ಯ ಕ್ಷೇತ್ರದ ಜೀವನಾಡಿ ಕರೋನ ಮಹಾಮಾರಿ ಪಿಡುಗನ್ನು ದಿಟ್ಟವಾಗಿ ಎದುರಿಸುವಲ್ಲಿ ಫಾರ್ಮಸಿಸ್ಟ್ ಗಳ ಅವಿರತ ಸೇವೆಯು ಕಾರಣವಾಗಿದೆ.
ಮುಖ್ಯ ಅತಿಥಿಗಳಾಗಿ ಟಿ.ಪಿ ಸುಜಿತ್, ಡೆಪ್ಯುಟಿ ಡ್ರಗ್ಸ್ ಕಂಟ್ರೋಲರ್, ಮಂಗಳೂರು ಇವರು ಆರೋಗ್ಯ ಕ್ಷೇತ್ರಕ್ಕೆ ಔಷಧೀಯ ತಜ್ಞರ ಕೊಡುಗೆ ಅಪಾರ ಎಂದು ಹೇಳಿದರು. ಬಿ ಎನ್ ಬಾಬು., ಅಸಿಸ್ಟೆಂಟ್ ಡ್ರಗ್ಸ್ ಕಂಟ್ರೋಲರ್ ಮಂಗಳೂರು ಇವರು ಫಾರ್ಮಸಿಸ್ಟ್ ಹಾಗೂ ಅವರ ಧ್ಯೇಯವನ್ನು ವಿವರಿಸಿದ್ದರು ಮತ್ತು ಉದಯ್ ಕಿಶೋರ್, ಅಸಿಸ್ಟೆಂಟ್ ಡ್ರಗ್ಸ್ ಕಂಟ್ರೋಲರ್ ವಿದ್ಯಾರ್ಥಿಗಳು ಔಷಧ ಕ್ಷೇತ್ರದಲ್ಲಿ ಅಗಣಿತ ಅವಕಾಶಗಳಿರುವುದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆಯಿತ್ತರು. ಶ್ರೀಮತಿ ವಿಜಯಲಕ್ಷ್ಮಿ ಆರ್ ರಾವ್., ಮೆಂಬರ್ ಬೋರ್ಡ್ ಆಫ್ ಗವರ್ನರ್, ಶ್ರೀನಿವಾಸ್ ಯುನಿವರ್ಸಿಟಿ ಮಂಗಳೂರಿನ, ಶ್ರೀಮತಿ ಇ ಆರ್ ಎ ಮಿತ್ರಾ ಎಸ್ ರಾವ್., ಮಂಗಳೂರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಬಿ ಮೋಹನ್ ದಾಸ್ ಗೌಡ ಹಿರಿಯ ಫಾರ್ಮಸಿಸ್ಟ್, ಶಿವ ಗಣೇಶ್ ಮೆಡಿಕಲ್ಸ್ ಕೊಕ್ಕಡ ಇವರ ಅಭಿನಂದನ ಉಲ್ಲೇಖವನ್ನು ಕಾರ್ಯಕ್ರಮದ ಸಂಯೋಜಕ ದ.ಕ ಜಿಲ್ಲಾ ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎ.ಆರ್ ಶಬರಾಯರು ವಿವರಿಸಿದರು.
ಡಾ.ಇ.ವಿ.ಎಸ್. ಸುಬ್ರಹ್ಮಣ್ಯಂ, ಪ್ರೊಫೆಸರ್ ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿ ಮತ್ತು ಉಪಾಧ್ಯಕ್ಷರು ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಷನ್ ಮಂಗಳೂರು ಇವರು ಅತಿಥಿಗಳನ್ನು ಸ್ವಾಗತಿಸಿ. ವೀರೇಶ್ ಕೆ ಚಂಡೂರು ವಂದಿಸಿ. ಕುಮಾರಿ ಸುಲಾಲತ್ ಮತ್ತು ಮಹಮ್ಮದ್ ಬಿಲಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.

See also  ಮಂಚಿಯಲ್ಲಿ ಸಭಾ ಕೌಶಲ್ಯ ತರಬೇತಿ ಹಾಗೂ ಹಾಗೂ ನಿವೃತ್ತ ಯೋಧರಿಗೆ ಗೌರವ ಸನ್ಮಾನ

Leave a Reply

Your email address will not be published. Required fields are marked *

error: Content is protected !!