ಇಚ್ಲಂಪಾಡಿ: ನೂತನವಾಗಿ ರಚನೆಗೊಂಡ ಶ್ರೀ ಸಿದ್ಧಿ ವಿನಾಯಕ ಮಹಿಳಾ ಭಜನಾ ಮಂಡಳಿ

ಶೇರ್ ಮಾಡಿ

ನೇಸರ .ಸೆ.26 :ಕಡಬ ತಾಲೂಕು ಇಚಿಲಂಪಾಡಿ ಗ್ರಾಮದಲ್ಲಿ ದಿನಾಂಕ 25 -09 -2022 ನೇ ಭಾನುವಾರದಂದು ನೂತನವಾಗಿ ರಚನೆಗೊಂಡ ಶ್ರೀ ಸಿದ್ಧಿ ವಿನಾಯಕ ಮಹಿಳಾ ಭಜನಾ ಮಂಡಳಿ ನೇರ್ಲ ಇಚ್ಲಂಪಾಡಿ ಇದರ ಕಾರ್ಯಕ್ರಮವನ್ನು ಭಜನಾ ಮಂದಿರ‌ದ ಆಡಳಿತ ಸಮಿತಿ ಅಧ್ಯಕ್ಷರಾದ  ಕೇಶವ ಗೌಡ ಅಲೆಕ್ಕಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರಾದ  ರಾಧಾಕೃಷ್ಣ ಕೆರ್ನಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು

ವೇದಿಕೆಯಲ್ಲಿ ಕಡಬ ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷೆ ಶ್ರೀಮತಿ ನಂದಾ ಪಾದೆ,ವಲಯ ಸದಸ್ಯರಾದ  ಪೂವಪ್ಪ ಗೌಡ, ಭಜನಾ ತರಬೇತಿ ನೀಡಲಿರುವ  ಅಕ್ಷಯ್ ಗೌಡ ನೇರ್ಲ ಉಪಸ್ಥಿತರಿದ್ದರು.

ನೂತನ ಸಮಿತಿಯನ್ನು ರಚಿಸಲಾಯಿತು. ತಂಡದ ಅಧ್ಯಕ್ಷರಾಗಿ ಶ್ರೀಮತಿ ರತ್ನಾವತಿ ಬಿಜೇರು, ಉಪಾಧ್ಯಕ್ಷರಾಗಿ ಶ್ರೀಮತಿ ರೇಖಾ ಒಡ್ಯೆತ್ತಡ್ಕ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶುಭಾ ಬಿಜೇರು, ಜತೆ ಕಾರ್ಯದರ್ಶಿ ಶ್ರೀಮತಿ ಹರಿಣಾಕ್ಷಿ ಮೂಡೆಜಾಲು, ಕೋಶಾಧಿಕಾರಿ ಶ್ರೀಮತಿ ಶೇಷಮ್ಮ ಪೈಸಾರಿ,ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಶ್ರೀಮತಿ ವನಿತಾ ದಿನೇಶ್ ಒಡ್ಯೆತ್ತಡ್ಕ, ಶ್ರೀಮತಿ ಅಕ್ಷತಾ ಒಡ್ಯೆತ್ತಡ್ಕ, ಶ್ರೀಮತಿ ಪ್ರೇಮಾ ಬಿಜೇರು, ಶ್ರೀಮತಿ ಯಶೋಧ ಕಟ್ಟತ್ತಂಡ ಆಯ್ಕೆಯಾಗಿದ್ದಾರೆ.

ರಾಮನಗರ ಬಲ್ಯ – 17ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

🌸ಜಾಹೀರಾತು🌸

Leave a Reply

error: Content is protected !!