ಕೊಕ್ಕಡ: ಕೌಕ್ರಾಡಿ ಹಾಲು ಉತ್ಪಾದಕ ಸಹಕಾರಿ ಸಂಘ (ನಿ) ಕೊಕ್ಕಡ ಇವರ ವಿಸ್ತ್ರತ ಕಟ್ಟಡದ ಉದ್ಘಾಟನೆ ಮತ್ತು ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ವಿಸ್ತ್ರತ ಕಟ್ಟಡದ ಉದ್ಘಾಟನೆಯನ್ನು ಎಸ್. ಬಿ. ಜಯರಾಮ ರೈ ಬಳ್ಳಜ್ಜ, ಉಪಾಧ್ಯಕ್ಷರು ದ.ಕ. ಹಾಲು ಒಕ್ಕೂಟ ಮಂಗಳೂರು ಇವರು ನೆರವೇರಿದರು.
ನವಿಕೃತ ಕಚೇರಿ ಉದ್ಘಾಟನೆಯನ್ನು ಪದ್ಮನಾಭ ಶೆಟ್ಟಿ ಅರ್ಕಂಜೆ ನಿರ್ದೇಶಕರು ಹಾಲು ಒಕ್ಕೂಟ ಮಂಗಳೂರು ನೆರವೇರಿಸಿದರು.
ಬಳಿಕ ಸಂತ ಜೋನ್ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರಫಾಯಲ್ ಸ್ಟ್ರೆಲ್ಲಾ, ಅಧ್ಯಕ್ಷರು ಕೌಕ್ರಾಡಿ ಹಾಲು ಉತ್ಪಾದಕರ ಸಂಘ ಇವರು ಅಧ್ಯಕ್ಷತೆಯನ್ನು ವಹಿಸಿ ಪ್ರಸ್ತಾವಿಕ ಮಾತನಾಡಿದ ಅವರು “2015ರಲ್ಲಿ ಆರಂಭವಾದ ಈ ಸಂಘ 10ರೂ ಷೇರು ಬಂಡವಾಳದೊಂದಿಗೆ ಆರಂಭವಾಗಿ ಕೆಲವೇ ಕೆಲವು ಸದಸ್ಯರೊಳಗೊಂಡಿದ್ದು, ಪ್ರಸ್ತುತ 318 ಸದಸ್ಯರಿದ್ದು, 92 ಸದಸ್ಯರು ನಿತ್ಯ ಹಾಲು ಪೂರೈಸುತ್ತಿದ್ದಾರೆ, ದಿನ 550 ಲೀ ಹಾಲು ಶೇಖರಣೆಯಾಗುತಿದೆ. ಸದಸ್ಯರಿಗೆ ಡೆವಿಡೆಂಟ್ ನೀಡಿದ್ದು ಸಂಪೂರ್ಣ ಲಾಭದಲ್ಲಿದೆ ಎಂದರು. ಮಂಗಳೂರು ಹಾಲು ಒಕ್ಕೂಟದ ನಿರ್ದೇಶಕರು ಪದ್ಮನಾಭ ಶೆಟ್ಟಿ ಅರ್ಕಂಜೆ ದೀಪ ಬೆಳಗಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಸನ್ಮಾನ:
ಕೌಕ್ರಾಡಿ ಹಾಲು ಒಕ್ಕೂಟದ ಸ್ಥಾಪಕಾದ್ಯಕ್ಷರಾದ ಡಾ.ಯು.ಗಣಪತಿ ಭಟ್ ದಂಪತಿಗಳನ್ನು ಬೆಳ್ಳಿ ಹಬ್ಬದ ನೆನಪಿಗಾಗಿ ಸನ್ಮಾನಿಸಲಾಯಿತು.
ಸಂಘದ ಸದಸ್ಯರುಗಳಿಗೆ ಈ ಸಂದರ್ಭದಲ್ಲಿ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಪ್ರಥಮ ಬಹುಮಾನ : ಪ್ರಸನ್ನ ಕುಮಾರ್, ದ್ವಿತೀಯ ಬಹುಮಾನ :ರಾಜು ಗೌಡ, ತೃತೀಯ ಬಹುಮಾನ :ಎಲ್ಸತ ವರ್ಗಿಸ್ ಪಡೆದುಕೊಂಡರು.
ವೇದಿಕೆಯಲ್ಲಿ ಸವಿತಾ ಎಸ್ ಶೆಟ್ಟಿ, ರೆ.ಫಾ.ಜಗದೀಶ್ ಪಿಂಟೋ, ಸತೀಶ್ ರಾವ್, ಶ್ರೀಮತಿ ಭವಾನಿ, ಜನಾರ್ಧನ ಗೌಡ, ಎನ್. ನಾಗೇಶ್, ಶ್ರೀಮತಿ ಮಮತಾ, ಫೆಲ್ಸಿ ವೇಗಸ್ ಉಪಸ್ಥಿತರಿದ್ದರು. ವಿನ್ಸೆಂಟ್ ಮೆನೇಜಸ್ ನಿರೂಪಿಸಿದರು.