ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧೀ ಜಯಂತಿ ಆಚರಣೆಯು ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯ ಗುರುಗಳಾದ ಸತೀಶ್ ಭಟ್‌ರವರು, “ಮಹಾತ್ಮ ಗಾಂಧೀಜಿಯವರು ರಾಷ್ಟ್ರದ ಪಿತ. ಅವರ ಸಮರ್ಪಣೆಯ ಫಲವನ್ನೇ ನಾವಿಂದು ಸವಿಯುತ್ತೆದ್ದೇವೆ. ಅದಲ್ಲದೆ ಇಂದು ನಮ್ಮ ಹೆಮ್ಮಯ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜೀ ಯವರ ಹುಟ್ಟು ಹಬ್ಬವೂ ಹೌದು. ಹಾಗಾಗಿ ಇಂದು ಈ ಮಹಾತ್ಮರನ್ನು ನೆನೆಯೋಣ, ಅವರ ಆದರ್ಶಗಳನ್ನು ಪಾಲಿಸೋಣ” ಎಂದು ಕರೆಯನ್ನು ಕೊಟ್ಟರು. ಈ ಸಂದರ್ಭದಲ್ಲಿ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ಕೆ., ಯವರು ಶುಭಹಾರೈಸಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ-ಉಪನ್ಯಾಸಕೇತರವೃಂದ, ಪ್ರೌಢಶಾಲೆಯ ಅಧ್ಯಾಪಕ-ಅಧ್ಯಾಪಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.