ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಸರಳತೆ, ಅಹಿಂಸೆ, ಸತ್ಯಾಗ್ರಹ, ಗ್ರಾಮರಾಜ್ಯದ ಚಿಂತನೆಗಳು ಇವತ್ತಿಗೂ ಪ್ರಸ್ತುತವಾಗಿದೆ – ಬೊಂಡಾಲ ಸಚ್ಚಿದಾನಂದ ಶೆಟ್ಟಿ

ಶೇರ್ ಮಾಡಿ

ಬಂಟ್ವಾಳ: ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಸರಳತೆ, ಅಹಿಂಸೆ,ಸತ್ಯಾಗ್ರಹ, ಗ್ರಾಮರಾಜ್ಯದ ಚಿಂತನೆಗಳು ಇವತ್ತಿಗೂ ಪ್ರಸ್ತುತವಾಗಿದೆ. ಆದುದರಿಂದ ಇಬ್ಬರೂ ನಾಯಕರ ಆದರ್ಶಗಳ ಪಾಲನೆಯೇ ನಾವು ಅವರಿಗೆ ನೀಡುವ ಗೌರವ ಎಂದು ಬೊಂಡಾಲ ಸಚ್ಚಿದಾನಂದ ಶೆಟ್ಟಿಯವರು ಹೇಳಿದರು.
ಅವರು ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಯಲ್ಲಿ ಜೆಸಿಐ ಜೋಡುಮಾರ್ಗ ನೇತ್ರಾವತಿ, ಇಂಟಾರ್ಯಾಕ್ಟ್ ಕ್ಲಬ್ ಬಂಟ್ವಾಳ ಟೌನ್, ಶಾಲಾ ಅಳುಪ ಸಮಾಜ ವಿಜ್ಞಾನ ಸಂಘದ ಆಶ್ರಯದಲ್ಲಿ ನಡೆದ ಗಾಂಧೀಜಿ ಮತ್ತು ಶಾಸ್ತ್ರಿ ಯವರ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತಾನಾಡುತ್ತಿದ್ದರು.
ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ, ಜೆಸಿಐ ಅಧ್ಯಕ್ಷ ಹರಿಪ್ರಸಾದ್ ಕುಲಾಲ್, ಶಿಕ್ಷಕರಾದ ವಸಂತಿ, ಭಾರತಿ, ವರಮಹಾಲಕ್ಷ್ಮೀ, ಮಂಜುಶ್ರೀ, ಪ್ರಕಾಶ್, ಸುಜಾತ, ಹರೀಶ್ ವಿದ್ಯಾರ್ಥಿ ನಾಯಕರಾದ ತನಿಶಾ, ರಶ್ಮಿತಾ, ಮೌಲ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಗಾಂಧೀಜಿಯವರ ನೆಚ್ಚಿನ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

Leave a Reply

error: Content is protected !!