ನೆಲ್ಯಾಡಿ: ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಅ.01ರ ಶನಿವಾರದಂದು ಗುಜರಾತ್ ನಲ್ಲಿ ನಡೆಯಲಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಮಹಿಳಾ ಕ್ರೀಡಾಪಟುಗಳು ಪ್ರದರ್ಶನ ಪಂದ್ಯಾಟ ನೀಡಿದರು. ಇವರ ಎದುರಾಳಿಯಾಗಿ ಪುತ್ತೂರಿನ ಮಿತ್ರ ತಂಡವು ಆಟವಾಡಿದರು. ಪ್ರದರ್ಶನ ಪಂದ್ಯದಲ್ಲಿ ಪುರುಷರ ತಂಡವು ಗೆಲುವನ್ನು ಪಡೆದುಕೊಂಡಿತು.
ಬೆಥನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾ.ತೋಮಸ್ ಬಿಜಿಲಿ, ರಾಷ್ಟ್ರೀಯ ಮಹಿಳಾ ತಂಡದ ತರಬೇತಿದಾರರಾದ ಮನೋಜ್ ಕೆ ಜೆ, ಸರಕಾರಿ ಪ್ರೌಢಶಾಲೆ ಪಡುಬೆಟ್ಟು ಇಲ್ಲಿನ ದೈಹಿಕ ಶಿಕ್ಷಕರಾದ ಕುಶಾಲಪ್ಪ, ನೆಲ್ಯಾಡಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಜನಾರ್ದನ.ಟಿ., ಮಾಜಿ ತಾಲೂಕು ಪಂಚಾಯತ್ ಸದಸ್ಯದ ಉಷಾ ಅಂಚನ್, ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಬಾಣಜಾಲು, ಕೆ.ಪಿ ತೋಮಸ್ ಮೊದಲಾದವರು ಉಪಸ್ಥಿತರಿದ್ದರು.