ಪುತ್ತೂರು: ವಿದ್ಯಾಭಾರತಿ ಕರ್ನಾಟಕ, ಹಾಗೂ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಇವರ ಜಂಟಿ ಆಶ್ರಯದಲ್ಲಿ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 13, 14ರಂದು ಕರ್ನಾಟಕ ಆಂಧ್ರ ಪ್ರದೇಶ್ ತೆಲಂಗಣ ರಾಜ್ಯ ವನ್ನು ಒಳಗೊಂಡ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿ, 14 ಚಿನ್ನ, 8 ಬೆಳ್ಳಿ, ಮತ್ತು 2 ಕಂಚಿನ ಪದಕ ಪಡೆದುಕೊಂಡಿರುತ್ತಾರೆ.
14ರ ವಯೋಮಾನದ ಬಾಲ ವರ್ಗದ ಬಾಲಕರ ವಿಭಾಗದಲ್ಲಿ ಕೃಪಾಲ್.ಪಿ.ಕೆ (ಕೆಮ್ಮಾಯಿ ಪ್ರಕಾಶ್.ಬಿ, ಸುನೀತಾ ಸಿ.ಎಚ್ ದಂಪತಿ ಪುತ್ರ) 600 ಮೀಟರ್-ದ್ವಿತೀಯ, ಅಭಿಶ್ಯಾಮ(ಪರ್ಲಡ್ಕ ಮುರಳೀಧರ್, ರಾಜೇಶ್ವರಿ ದಂಪತಿ ಪುತ್ರ) ಎತ್ತರ ಜಿಗಿತ -ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
14ರ ವಯೋಮಾನದ ಬಾಲ ವರ್ಗದ ಬಾಲಕಿಯರ ವಿಭಾಗದಲ್ಲಿ ಶ್ರೀವರ್ಣಾ (ಪಾಲೆತ್ತಡಿ ಧರ್ಣಪ್ಪ ಗೌಡ, ಮಮತಾ.ಪಿ. ದಂಪತಿ ಪುತ್ರಿ)-ಎತ್ತರ ಜಿಗಿತ, 80 ಮೀಟರ್ ಹರ್ಡಲ್ಸ್, ಉದ್ದ ಜಿಗಿತ , 4100 ಮೀಟರ್ ರಿಲೇ -ಪ್ರಥಮ, ಡಿಂಪಲ್ ಶೆಟ್ಟಿ(ಮೆರ್ಲ ನಿವಾಸಿ ಉದಯ ಶೆಟ್ಟಿ ಮತ್ತು ಸುನೀತಾ ಶೆಟ್ಟಿ ದಂಪತಿ ಪುತ್ರಿ) – 100 ಮೀಟರ್ -ದ್ವಿತೀಯ, 4100 ಮೀಟರ್ ರಿಲೇ -ಪ್ರಥಮ, ಅಮೃತಾ.ಬಿ.ಎ (ಬನ್ನೂರು ಪಟ್ಟೆ ಅಮರನಾಥ್, ಲತಾ ಕುಮಾರಿ ದಂಪತಿ ಪುತ್ರಿ) 600 ಮೀಟರ್ -ದ್ವಿತೀಯ, 4100 ಮೀಟರ್ ರಿಲೇ -ಪ್ರಥಮ, ಕೃತಿ,ಕೆ (ಬನ್ನೂರು ಕೊರಗಪ್ಪ ಗೌಡ, ವನಿತಾ.ಎ ದಂಪತಿ ಪುತ್ರಿ) ಕೃತಿ,ಕೆ (ಬನ್ನೂರು ಕೊರಗಪ್ಪ ಗೌಡ, ವನಿತಾ.ಎ ದಂಪತಿ ಪುತ್ರಿ)- 600 ಮೀಟರ್-ಪ್ರಥಮ, 400 ಮೀಟರ್- ದ್ವಿತೀಯ, 4100 ಮೀಟರ್ ರಿಲೇ -ಪ್ರಥಮ ಸ್ಥಾನ ಗಳಿಸಿದ್ದಾರೆ.
17ರ ವಯೋಮಾನದ ಬಾಲ ವರ್ಗದ ಬಾಲಕರ ವಿಭಾಗದಲ್ಲಿ ಚರಣ್ ಕುಮಾರ್ (ಅಳಿಕೆ ದೇವಳಗುಳಿ ಕೃಷ್ಣ ಕುಮಾರ್, ಪ್ರೇಮಾ ದಂಪತಿ ಪುತ್ರ)- 3 ಕಿಲೋಮೀಟರ್ ನಡಿಗೆ -ಪ್ರಥಮ, 3000 ಮೀಟರ್ -ದ್ವಿತೀಯ ಸ್ಥಾನ ಪಡೆದಿರುತ್ತಾನೆ.
17ರ ವಯೋಮಾನದ ಬಾಲ ವರ್ಗದ ಬಾಲಕರ ವಿಭಾಗದಲ್ಲಿ ವಂಶಿ.ಬಿ.ಕೆ (ಬಪ್ಪಳಿಗೆ ಕಮಲಾಕ್ಷ, ಜಯಲತಾ ದಂಪತಿ ಪುತ್ರಿ): 100 ಮೀಟರ್ ಹರ್ಡಲ್ಸ್ -ದ್ವಿತೀಯ, 4400 ಮೀಟರ್ ರಿಲೇ -ಪ್ರಥಮ, ಸಾನ್ವಿ.ಎಸ್.ಪಿ. (ಪಳಂಬೆ ಯೋಧ ಡಿ.ಸುಂದರ ಪೂಜಾರಿ, ಶಿಕ್ಷಕಿ ಭವಿತಾ.ಕೆ ದಂಪತಿ ಪುತ್ರಿ) 4400 ಮೀಟರ್ ರಿಲೇ -ಪ್ರಥಮ, ಅನ್ನಿಕಾ (ಚಾರ್ವಾಕ ಎ.ಎಸ್.ಐ ಕೃಷ್ಣಪ್ಪ.ಎಂ, ಶಿಕ್ಷಕಿ ವಾಣಿಶ್ರೀ ದಂಪತಿ ಪುತ್ರಿ) 3000 ಮೀಟರ್ -ಪ್ರಥಮ, ರಿದ್ಧಿ.ಸಿ.ಶೆಟ್ಟಿ (ಪುಂಡಿಕಾಯಿ ಚಿದಾನಂದ ಶೆಟ್ಟಿ, ಸತ್ಯವತಿ.ಸಿ.ಶೆಟ್ಟಿ ದಂಪತಿ ಪುತ್ರಿ) 4400 ಮೀಟರ್ ರಿಲೇ -ಪ್ರಥಮ, ಬಿ.ಲಿಖಿತಾ ರೈ (ಚಣಿಲ ಬಿ.ಜಗನ್ನಾಥ್ ರೈ, ಗೀತಾ.ಜೆ.ರೈ ದಂಪತಿ ಪುತ್ರಿ) – 400 ಮೀಟರ್-ಪ್ರಥಮ, 4400 ಮೀಟರ್ ರಿಲೇ -ಪ್ರಥಮ, ಸಮೃದ್ಧಿ.ಜೆ.ಶೆಟ್ಟಿ (ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಹರಿಣಾಕ್ಷಿ.ಜೆ.ಶೆಟ್ಟಿ ದಂಪತಿ ಪುತ್ರಿ) -ಉದ್ದ ಜಿಗಿತ -ದ್ವಿತೀಯ, ಶ್ರದ್ಧಾ ಲಕ್ಷ್ಮೀ (ತಾರಿಗುಡ್ಡೆ ರವಿಶಂಕರ್ , ಅನುಪಮಾ ದಂಪತಿ ಪುತ್ರಿ) ಟ್ರಿಪಲ್ ಜಂಪ್ -ತೃತೀಯ ಸ್ಥಾನ ಗಳಿಸಿರುತ್ತಾರೆ.
ಒಟ್ಟು 8 ವಿದ್ಯಾರ್ಥಿಗಳು ನವೆಂಬರ್ 19ರಿಂದ 23ರವರೆಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾಗಿರುತ್ತಾರೆ. ದೈಹಿಕ ಶಿಕ್ಷಣ ವಿಭಾಗ ಮುಖ್ಯಸ್ಥರಾದ ಭಾಸ್ಕರ ಗೌಡ ಮುಂಗ್ಲಿಮನೆಯವರ ಮಾರ್ಗದರ್ಶನದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಆಶಾಲತಾ, ಶ್ರೀಮತಿ ನಮಿತಾ, ದೀಪಕ್, ಶ್ರೀಮತಿ ರಶ್ಮಿ,ಪವನ್ ಕುಮಾರ್ ಇವರ ಸಹಕಾರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ಕಣಿಯಾರು ಮತ್ತು ಶ್ರೀಮತಿ ವಾಣಿಶ್ರೀ ಇವರುಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತರಬೇತುಗೊಳಿಸಿರುತ್ತಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.