ಬಂದಾರು ಮೃತರ ಕುಟುಂಬಕ್ಕೆ ಸಹಾಯಹಸ್ತ

ಶೇರ್ ಮಾಡಿ

ಬಂದಾರು: ನ.2 ಬಂದಾರು ಗ್ರಾಮದ ಬೈಪಾಡಿ ನೇರೋಳ್ದಪಲಿಕೆ (ಪೆರ್ಲ) ಕಾಲೋನಿಯಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ಮೃತರಾದ ಬಾಬು ಅವರ ತಾಯಿ ಚಂರ್ಬೆ ಅವರ ಕುಟುಂಬಕ್ಕೆ ಮಾನ್ಯ ಶಾಸಕ ಹರೀಶ್ ಪೂಂಜರವರು ನೀಡಿದ ಧನ ಸಹಾಯ ಹಾಗೂ ಗ್ರಾಮಪಂಚಾಯತ್ ವತಿಯಿಂದ ತುರ್ತು ಸಹಾಯದ ನಿಧಿಯ ರೂ 3,000/- ದ ಚೆಕ್ ಬಂದಾರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪರಮೇಶ್ವರಿ ಕೆ ಗೌಡ ಹಾಗೂ ಬೂತ್ ಪ್ರಮುಖರಾದ ಹೊನ್ನಪ್ಪ ಗೌಡ ಅವರು ಮೃತರ ಮೃತರ ತಾಯಿಗೆ ಹಸ್ತಾಂತರ ಮಾಡಿ, ಸಾಂತ್ವನ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ, ಗ್ರಾ.ಪಂ.ಸದಸ್ಯರಾದ ಶ್ರೀಮತಿ ಭಾರತಿ, ಶ್ರಿಮತಿ ಅನಿತಾ ಹಾಗೂ ಬೂತ್ ಮಟ್ಟದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

error: Content is protected !!