ವೃದ್ಧಾಶ್ರಮದಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜು

ಶೇರ್ ಮಾಡಿ

ನೆಲ್ಯಾಡಿ : ರಾಜ್ಯೋತ್ಸವ ಸಂಭ್ರಮಾಚರಣೆಯನ್ನು ಎನ್.ಎಸ್.ಎಸ್ ಸಂಯೋಜನಾಧಿಕಾರಿ ವನಿತಾ ಪಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಎಲ್ಲಾ ಸ್ವಯಂ ಸೇವಕ ವಿದ್ಯಾರ್ಥಿ, ವಿದ್ಯಾರ್ಥಿನಿಯರೊಂದಿಗೆ ನೆಲ್ಯಾಡಿಯ ಪ್ರಶಾಂತ ನಿವಾಸದಲ್ಲಿರುವ ಸಂತ ಜೋಸೆಫ್ ಸಿಸ್ಟರ್ಸ್ ಆಫ್ ಚಾರಿಟಿಯಲ್ಲಿರುವ ವೃದ್ಧಾಶ್ರಮಕ್ಕೆ ಭೇಟಿ ನೀಡ ಆಚರಿಸಲಾಯಿತು.

ಆಶ್ರಮದಲ್ಲಿರುವ ವೃದ್ಧ ಚೇತನರೊಂದಿಗೆ ಸ್ವಯಂ ಸೇವಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಡು, ನೃತ್ಯ ಹಾಗೂ ಅನೇಕ ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಿ ಆಚರಿಸಿ, ಅವರಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು.

ಆಶ್ರಮದ ಅಧಿಕಾರಿಗಳು, ಸಿಸ್ಟರ್ಸ್, ಸಿಬ್ಬಂದಿ ವರ್ಗದವರು ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಕಾಲೇಜಿನ ಎನ್.ಎಸ್.ಎಸ್ ಘಟಕದ ಅಧಿಕಾರಿ ಮತ್ತು ಸ್ವಯಂ ಸೇವಕರಿಗೆ ಕೃತಜ್ಞತೆಗಳನ್ನು ಸಮರ್ಪಿಸಿದರು.

Leave a Reply

error: Content is protected !!