
ಕಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ, ಕಣಿಯೂರು-ಪದ್ಮುಂಜ, ಜನಜಾಗ್ರತಿ ಗ್ರಾಮ ಸಮಿತಿ ಕಣಿಯೂರು ವಿಭಾಗ, ಶ್ರೀ ಮಹಾವಿಷ್ಣು ದೇವಸ್ಥಾನ ಕಣಿಯೂರು ಇದರ ಆಶ್ರಯದಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ, ಗ್ರಾಮ ಸುಭೀಕ್ಷಾ ಕಾರ್ಯಕ್ರಮದಡಿಯಲ್ಲಿ ಸೀಯಾಲಾಭಿಷೇಕ ನಡೆಯಿತು.
ಈ ಕಾರ್ಯಕ್ರಮದಲ್ಲಿ ರೈತ ಬಂಧು ಮಾಲೀಕರಾದ ಶಿವಶಂಕರ್, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷರಾದ ಪ್ರಫುಲ್ಲಚಂದ್ರ ಅಡ್ಯಂತಾಯ, ವಲಯಾಧ್ಯಕ್ಷರಾದ ರಮಾನಂದ ಪೂಜಾರಿ, ಕಣಿಯೂರು ಒಕ್ಕೂಟ ಅಧ್ಯಕ್ಷರು ತಿಲಕ್, ಪದಾಧಿಕಾರಿಗಳು, ಜನಜಾಗೃತಿ ತಾಲೂಕು ಸಮಿತಿ ಸದಸ್ಯರಾದ ರಾಜೀವ್ ರೈ, ಜನಜಾಗೃತಿ ಶಿಬಿರಾಧಿಕಾರಿ ನಂದಕುಮಾರ್, ವಲಯ ಮೇಲ್ವಿಚಾರಕಿ ಶ್ರೀಮತಿ ಪ್ರೇಮಾ, ಸೇವಾಪ್ರತಿನಿಧಿಗಳಾದ ತಾರ, ಪ್ರೇಮಾ, ಸೀತಾರಾಮ ಆಳ್ವ ಉಪಸ್ಥಿತರಿದ್ದರು.




