ಸುಳ್ಯ: ನೆಹರೂ ಮೆಮೊರಿಯಲ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿ ಮತ್ತು ಐಕ್ಯೂಎಸಿ ವತಿಯಿಂದ ತೊಗಲು ಗೊಂಬೆ ಪ್ರದರ್ಶನವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.
ಹಾಸನದ ರಾಜರಾಮ್ ತೊಗಲು ಗೊಂಬೆ ಕಲಾ ಸಂಘದವರು ತೊಗಲು ಗೊಂಬೆ ಪ್ರದರ್ಶನವನ್ನು ನಡೆಸಿಕೊಟ್ಟರು. ಪ್ರಧಾನ ಮಂತ್ರಿಗಳ ವಿವಿಧ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮದಡಿಯಲ್ಲಿ ಸರಕಾರದ ಸಂಗೀತ ಮತ್ತು ನಾಟಕ ವಿಭಾಗದ ವತಿಯಿಂದ ಹಮ್ಮಿಕೊಂಡ ಯೋಜನೆಯಂತೆ ರಾಜ್ಯಾದ್ಯಂತ ಈ ತಂಡ ತೊಗಲು ಗೊಂಬೆ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಕಲಾತಂಡದ ಮುಖ್ಯಸ್ಥ ಗುಂಡುರಾಜ್ ರವರ ನೇತೃತ್ವದಲ್ಲಿ ಐದು ಜನರ ಕಲಾ ತಂಡ ನೆರಳು ಗೊಂಬೆಯಾಟದ ಒಂದು ರೂಪವಾದ ತೊಗಲು ಗೊಂಬೆಯಾಟ ಪ್ರದರ್ಶನವನ್ನು ತಮ್ಮ ಅದ್ಭುತ ಕೈಚಳಕ ಹಾಗೂ ವಾಕ್ ಚಾತುರ್ಯದ ಮೂಲಕ ನಡೆಸಿಕೊಟ್ಟಿತು.
ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ ಸಂಸ್ಥೆಯ ಪರವಾಗಿ ಕಲಾ ತಂಡಕ್ಕೆ ಸ್ಮರಣಿಕೆಯನ್ನು ಹಸ್ತಾಂತರಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.