ನೆಲ್ಯಾಡಿ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ||ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ||

ಶೇರ್ ಮಾಡಿ

ನೇಸರ ಡಿ14. ನೆಲ್ಯಾಡಿ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನಿಂದ ನೀಡುವ 2020 -21 ನೇ ಸಾಲಿನ “ಅತ್ಯುತ್ತಮ ಸಹಕಾರಿ ಸಂಘ” ಪ್ರಶಸ್ತಿ ಲಭಿಸಿದೆ.
ಸಂಘವು ನೆಲ್ಯಾಡಿ,ಕೌಕ್ರಾಡಿ,ಇಚಿಲಂಪಾಡಿ,ಶಿರಡಿ,ಆಲಂತಾಯ,ಗೋಳಿತೊಟ್ಟು, ಕೋಣಾಲು ಎಂಬ 7 ಕಂದಾಯ ಗ್ರಾಮಗಳನ್ನು ಒಳಗೊಂಡು.ಗೋಳಿತೊಟ್ಟು ಮತ್ತು ಶಿರಾಡಿಯಲ್ಲಿ ಎಲ್ಲಾ ವ್ಯವಹಾರ ಮಾಡುವ ಶಾಖೆಯನ್ನು.ಇಚಿಲಂಪಾಡಿಯಲ್ಲಿ ಪಡಿತರ ವಿತರಣೆಯನ್ನು ಹೊಂದಿರುತ್ತದೆ. ಸಂಘವು 2020- 21 ನೇ ಸಾಲಿನಲ್ಲಿ 5679 “ಎ” ತರಗತಿ ಸದಸ್ಯರಿದ್ದು.6.22 ಕೋಟಿ ರೂ ಪಾಲು ಬಂಡವಾಳ. 23.05 ಕೋಟಿ ರೂ ಠೇವಣಿ,58.10 ಕೋಟಿ ರೂ ಸದಸ್ಯರ ಹೊರಬಾಕಿ ಸಾಲ,362.54 ಕೋಟಿ ರೂ ವ್ಯವಹಾರ ಮಾಡಿ,1.07 ಕೋಟಿ ರೂ ಲಾಭಗಳಿಸಿರುತ್ತದೆ.ಆಡಿಟ್ ವರ್ಗೀಕರಣದಲ್ಲಿ “ಎ” ಶ್ರೇಣಿ ಹೊಂದಿದೆ. ಎಲ್ಲಾ ಉತ್ತಮ ರೀತಿಯ ವ್ಯವಹಾರ ಮತ್ತು ಗ್ರಾಹಕರ ಸೇವೆಯಿಂದಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ “ಅತ್ಯುತ್ತಮ ಸಹಕಾರಿ ಸಂಘ” ಪ್ರಶಸ್ತಿಯನ್ನು ಡಿ.14 ರಂದು ನಡೆದ ಮಹಾಸಭೆಯಲ್ಲಿ ನೀಡಲಾಯಿತು.
ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸ್ತುತ ವರ್ಷ ಆಯೋಜಿಸಿರುವ ಸತತವಾಗಿ 25 ವರ್ಷ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಭಾಗವಹಿಸಿದ ಸಹಕಾರಿ ಸಂಘದ ನಿರ್ದೇಶಕರುಗಳಿಗೆ ವಿಶೇಷ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಪಟ್ಟೆ ಇವರಿಗೆ ಸತತ 27 ವರ್ಷ ಮಹಾಸಭೆಯಲ್ಲಿ ಭಾಗವಹಿಸಿರುವ ಮತ್ತು ಸಂಘದಲ್ಲಿ ನಿರಂತರ 27 ವರ್ಷಗಳಿಂದ ಅಧ್ಯಕ್ಷರಾಗಿರುವುದು ಪರಿಗಣಿಸಿ ಇವರಿಗೆ ವಿಶೇಷ ಗೌರವಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಪಟ್ಟೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾಕರ ರೈ.ಕೆ.ಎಂ,ನಿರ್ದೇಶಕರಾದ ಬಾಲಕೃಷ್ಣ ಬಾಣಜಾಲು,ಸಂಘದ ಬ್ಯಾಂಕ್ ಪ್ರತಿನಿಧಿ ವಸಂತ.ಎಸ್, ಸಂಘದ ಸದಸ್ಯರು ಹಾಗೂ ಭಾಸ್ಕರ ಗೌಡ ಇಚಿಲಂಪಾಡಿ, ಮೊದಲಾದವರು ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜೇಂದ್ರಕುಮಾರ್, ನಿರ್ದೇಶಕರಾದ ಶಶಿಕುಮಾರ್, ಜಯರಾಮ.ರೈ, ಮೊದಲಾದವರು ನಡೆಸಿಕೊಟ್ಟರು
.

Leave a Reply

error: Content is protected !!