



ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಹೊಸಮಜಲು ಸಮೀಪದ ದೋಂತಿಲ ನಿವಾಸಿ ಐಸಮ್ಮ(ವ.75)ಎಂಬ ಮಹಿಳೆ ಕಾಣೆಯಾಗಿರುವ ಬಗ್ಗೆ ಅವರ ಮಗ ಮಹಮ್ಮದ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಐಸಮ್ಮ ಅವರು ಫೆ.28ರಂದು ಸಂಜೆ 6.30ಕ್ಕೆ ಮನೆಯಿಂದ ಹೊರಹೋದವರು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಅಕ್ಕ ಪಕ್ಕದ ಪರಿಸರದಲ್ಲಿ ಎಲ್ಲಿ ಹುಡುಕಾಡಿದರು ಅವರ ಪತ್ತೆಯಾದ ಕಾರಣ. ಅವರ ಪತ್ತೆಗಾಗಿ ಮಗ ಮಹಮ್ಮದ್ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಎಲ್ಲಿಯಾದರೂ ಕಂಡು ಬಂದಲ್ಲಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ
ಸಂಪರ್ಕಿಸುವ ಸಂಖ್ಯೆ:
+91 9741300792
+91 9071503313