ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕೃಷಿ ಭೂಮಿಗೆ ಬೆಂಕಿ

ಶೇರ್ ಮಾಡಿ

ಬಲ್ಯ: ಕಡಬ ತಾಲೂಕು ಬಲ್ಯ ಗ್ರಾಮದ ಬಿರುಕು ಎಂಬಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು ರಂಜನ್ ರವರ ಕೃಷಿ ಭೂಮಿಗೆ ಬೆಂಕಿ ಆವರಿಸಿ ಕೃಷಿ ಹಾನಿಗೊಂಡ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ಘಟನೆಯಿಂದಾಗಿ ಸುಮಾರು 20 ರಬ್ಬರ್ ಮರಗಳು, ಬಾಳೆ ಕೃಷಿ ಬೆಂಕಿಗೆ ಆಹುತಿಯಾಗಿದೆ.
ಸ್ಥಳೀಯರು ಸೇರಿ ಬೆಂಕಿ ನಂದಿಸಲು ಸಹಕರಿಸಿದರು ಹಾಗೂ ಸುಳ್ಯದಿಂದ ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸಿದರು.

ಕಡಬ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆಯೂ ಇಲ್ಲದಿರುವುದರಿಂದ ಬೇರಡೆಯಿಂದ ಆಗಮಿಸುವಷ್ಟರಲ್ಲಿ ಅಪಾರ ನಷ್ಟ ಉಂಟಾಗುತ್ತದೆ. ಆದುದರಿಂದ ಕಡಬ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆಯೂ ಅಗತ್ಯ ಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ

Leave a Reply

error: Content is protected !!