CET 2023 ಇಂದಿನಿಂದ ಆನ್‌ಲೈನ್ ರಿಜಿಸ್ಟ್ರೇಷನ್ ಆರಂಭ..ಬೇಕಾದ ದಾಖಲೆ, ಪ್ರಮುಖ ದಿನಾಂಕಗಳು, ಇತರೆ ಮಾಹಿತಿ ಇಲ್ಲಿದೆ

ಶೇರ್ ಮಾಡಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಶಿಕ್ಷಣಕ್ಕೆ ಪ್ರವೇಶಾತಿ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (CET 2023) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇಂದಿನಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ ಮೂಲಕ ಕೆಸಿಇಟಿ ಪರೀಕ್ಷೆಗೆ ಆನ್‌ಲೈನ್‌ ರಿಜಿಸ್ಟ್ರೇಷನ್ ಆರಂಭವಾಗಲಿದೆ.
ಈ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಆಸಕ್ತ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಸಿಇಟಿ-2023ಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 02-03-2023 ರ ಬೆಳಗ್ಗೆ 11.00 ಘಂಟೆಯಿಂದ ಪ್ರಾರಂಭಿಸಲಾಗುತ್ತದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-04-2023 ಮತ್ತು ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 07-04-2023 ಆಗಿರುತ್ತದೆ.

KCET 2023 Registration ಹೇಗೆ?
ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
ಓಪನ್ ಆದ ಪೇಜ್‌ನಲ್ಲಿ ‘KCET Online Registration Link’ ಗೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ಓಪನ್ ಆಗುವ ಪೇಜ್‌ನಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ, ರಿಜಿಸ್ಟ್ರೇಷನ್ ಪಡೆದುಕೊಳ್ಳಿ.

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು:

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ.
ದ್ವಿತೀಯ ಪಿಯುಸಿ ಪ್ರವೇಶಾತಿ, ಇತರೆ ಮಾಹಿತಿಗಳು.
ಆಧಾರ್ ಕಾರ್ಡ್‌ ನಂಬರ್.
ಜನ್ಮ ದಿನಾಂಕ ಪ್ರಮಾಣ ಪತ್ರ.
ವಾಸಸ್ಥಳ ವಿಳಾಸ/ ದಾಖಲೆಗಳು.
ಜಾತಿ ಪ್ರಮಾಣ ಪತ್ರ.
ಆದಾಯ ಪ್ರಮಾಣ ಪತ್ರ.
ಇತ್ತೀಚಿನ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, ಸಹಿ ಸ್ಕ್ಯಾನ್ ಕಾಪಿ.

ಅರ್ಜಿಯನ್ನು ಭರ್ತಿ ಮಾಡುವ ಮೊದಲು, ಕೆಳಗಿನ ಪ್ರಮಾಣಪತ್ರಗಳೊಂದಿಗೆ ಸಿದ್ಧರಾಗಿರಿ:

SSLC / 10 ನೇ ಮಾರ್ಕ್ಸ್ ಕಾರ್ಡ್ – ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಲು.
12 ನೇ / 2 ನೇ ಪಿಯುಸಿ ಮಾರ್ಕ್ಸ್ ಕಾರ್ಡ್ – (ಹಿಂದಿನ ವರ್ಷದ ವಿದ್ಯಾರ್ಥಿಗಳ ಸಂದರ್ಭದಲ್ಲಿ).
ಆರ್‌ಡಿ ಸಂಖ್ಯೆ/ಜಾತಿ (ವರ್ಗ, ಆದಾಯ, ಕೆನೆರಹಿತ ಲೇಯರ್ ಪ್ರಮಾಣಪತ್ರ (ಎನ್‌ಸಿಎಲ್‌ಸಿ), ಹೈದ್ರಾಬಾದ್-ಕರ್ನಾಟಕ (ಎಚ್‌ಕೆ) ಪ್ರಮಾಣಪತ್ರಗಳನ್ನು ನಮೂದಿಸಲು ಎಲ್ಲಾ ಮೀಸಲಾತಿ ಪ್ರಮಾಣಪತ್ರಗಳು.
ಕರ್ನಾಟಕದಲ್ಲಿ ಅಧ್ಯಯನ ಮಾಡಿದ ವಿವರಗಳು.
.jpg ಸ್ವರೂಪದಲ್ಲಿ ಅಭ್ಯರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ (ಗರಿಷ್ಠ 50 KB ಗಾತ್ರ).
.jpg ಸ್ವರೂಪದಲ್ಲಿ ಅಭ್ಯರ್ಥಿಯ ಸಹಿ (ಗರಿಷ್ಠ 50 KB ಗಾತ್ರ).
.jpg ಸ್ವರೂಪದಲ್ಲಿ ಅಭ್ಯರ್ಥಿ ಎಡಗೈ ಹೆಬ್ಬೆರಳು (ಗರಿಷ್ಠ 50 KB ಗಾತ್ರ).

ಕೆಸಿಇಟಿ-2023 ಆನ್‌ಲೈನ್ ರಿಜಿಸ್ಟ್ರೇಷನ್ ಸಂಬಂಧಿಸಿದ ಪ್ರಮುಖ ದಿನಾಂಕಗಳು

ಸಿಇಟಿ 2023 ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ- 02-03-2023.
ಸಿಇಟಿ 2023 ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ- 05-04-2023.
ಆನ್‌ಲೈನ್‌ ಮೂಲಕ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – 07-04-2023.

ಸಾಮಾನ್ಯ ಪ್ರವೇಶ ಪರೀಕ್ಷೆ-2023 ವೇಳಾಪಟ್ಟಿ:

20-05-2023 – ಶನಿವಾರ – ಬೆಳಗ್ಗೆ 10.30 ರಿಂದ 11.50ರವರೆಗೆ – ಜೀವಶಾಸ್ತ್ರ
ಮಧ್ಯಾಹ್ನ 2.30 ರಿಂದ 3.50ರವರೆಗೆ- ಗಣಿತ ಶಾಸ್ತ್ರ
21-05-2023 – ಬೆಳಗ್ಗೆ 10.30 ರಿಂದ 11.50ರವರೆಗೆ – ಭೌತಶಾಸ್ತ್ರ.
ಮಧ್ಯಾಹ್ನ 2.30 ರಿಂದ 3.50ರವರೆಗೆ- ರಸಾಯನಶಾಸ್ತ್ರ.
ಈ ಮೇಲಿನ ವಿಷಯಗಳಿಗೆ ತಲಾ 60 ಅಂಕಗಳಿಗೆ ಪಶ್ನೆಗಳನ್ನು ಕೆಳಲಾಗುತ್ತದೆ.

ಕನ್ನಡ ಭಾಷಾ ಪರೀಕ್ಷೆ – ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತದೆ.
22-05-2023 – ಬೆಳಗ್ಗೆ 11.30 ರಿಂದ 12.30ರವರೆಗೆ – ಹೊರನಾಡು ಮತ್ತು ಗಡಿನಾಡು ಕನ್ನಡ ವಿದ್ಯಾರ್ಥಿಗಳಿಗೆ.

ಕೆಇಎ ಈ ಕೆಳಗಿನ ಕೋರ್ಸ್‌ಗಳಿಗೆ ಮೊದಲನೇ ವರ್ಷದ/ ಮೊದಲ ಸೆಮಿಸ್ಟರ್‌ಗೆ ಪ್ರವೇಶ ಪಡೆಯಲು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಿದೆ.

ಇಂಜಿನಿಯರಿಂಗ್.
ತಂತ್ರಜ್ಞಾನ.
ಯೋಗ ಮತ್ತು ನ್ಯಾಚುರೋಪತಿ.
ಬಿ-ಫಾರ್ಮ ಮತ್ತು ಫಾರ್ಮಾ-ಡಿ
ಕೃಷಿ ವಿಜ್ಞಾನ ಕೋರ್ಸ್‌ಗಳು.
ಕೃಷಿ ವಿಜ್ಞಾನ ಕೋರ್ಸ್‌ಗಳ ಅಡಿಯಲ್ಲಿ – [ಬಿ.ವಿ.ಎಸ್‌ಸಿ ಮತ್ತು ಎ ಹೆಚ್‌ (ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ), ಬಿ.ಎಸ್‌ಸಿ, (ಆನರ್ಸ್‌) ಕೃಷಿ, ಬಿಎಸ್‌ಸಿ, (ಆನರ್ಸ್) ಅರಣ್ಯ ವಿಜ್ಞಾನ, ಬಿ.ಎಸ್‌ಸಿ, (ಆನರ್ಸ್) ರೇಷ್ಮೆ ಕೃಷಿ, ಬಿ.ಎಸ್‌ಸಿ. ಬಿ.ಎಸ್‌ಸಿ (ಆನರ್ಸ್) ತೋಟಗಾರಿಕೆ, ಬಿ.ಎಸ್‌ಸಿ, (ಆನರ್ಸ್) ಕೃಷಿ ಜೈವಿಕ ತಂತ್ರಜ್ಞಾನ, ಬಿ.ಎಸ್‌ಸಿ, (ಆನರ್ಸ್) ಸಮುದಾಯ ವಿಜ್ಞಾನ, ಬಿ.ಟೆಕ್. (ಕೃಷಿ ಇಂಜಿನಿಯರಿಂಗ್), ಬಿ.ಟೆಕ್. (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ), ಬಿ.ಎಸ್‌ಸಿ. (ಕೃಷಿ ಮಾರುಕಟ್ಟೆ ಮತ್ತು ಸಹಕಾರ)]

Leave a Reply

error: Content is protected !!