ಅಗ್ನಿಪಥ’ದ ಅಗ್ನಿವೀರರು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ಕಂಪ್ಲೀಟ್ ಡೀಟೇಲ್ಸ್‌ ಇಲ್ಲಿದೆ..

ಶೇರ್ ಮಾಡಿ

2023-24ನೇ ಸಾಲಿಗೆ ಅಗ್ನಿಪಥ ಯೋಜನೆಯಡಿ ಅಗ್ನಿವೀರರ ನೇಮಕಾತಿಗೆ ಭಾರತೀಯ ಮಿಲಿಟರಿಯು ವಿವಿಧ ರಾಜ್ಯಗಳಲ್ಲಿ ವಿವಿಧ ಹಂತಗಳಲ್ಲಿ ನೇಮಕಾತಿ ಪರೀಕ್ಷೆ, ನೇಮಕಾತಿ ರ‍್ಯಾಲಿ ನಡೆಸಲು ಮುಂದಾಗಿದೆ. ಆದ್ದರಿಂದ ನೇಮಕಾತಿ ಕೇಂದ್ರಗಳವಾರು ನೋಟಿಫಿಕೇಶನ್‌ ಅನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ. ಅಂತೆಯೇ ರಾಜ್ಯದಲ್ಲಿ ಬೆಂಗಳೂರು ಹಾಗೂ ಮಂಗಳೂರು ಮಿಲಿಟರಿ ಸಿಬ್ಬಂದಿ ನೇಮಕ ಕಛೇರಿಗಳು ಸಹ ಅಗ್ನಿವೀರರ ಹುದ್ದೆಗೆ ಅರ್ಜಿ ಆಹ್ವಾನಿಸಿ ಪ್ರತ್ಯೇಕ ವೇಳಾಪಟ್ಟಿಯೊಂದಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ನೇಮಕಾತಿ ಪ್ರಾಧಿಕಾರ : ಮಂಗಳೂರು, ಬೆಂಗಳೂರು ಆರ್ಮಿ ನೇಮಕಾತಿ ಕೇಂದ್ರಗಳು
ಹುದ್ದೆಯ ಹೆಸರು : ಅಗ್ನಿಪಥ ಯೋಜನೆಯ ಅಗ್ನಿವೀರರ ಹುದ್ದೆಗಳು

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15-03-2023
ಮಂಗಳೂರು ಆರ್ಮಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದವರಿಗೆ ಆನ್‌ಲೈನ್‌ ಪರೀಕ್ಷೆ ದಿನಾಂಕ : 17-04-2023
ಬೆಂಗಳೂರು ಆರ್ಮಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದವರಿಗೆ ಆನ್‌ಲೈನ್‌ ಪರೀಕ್ಷೆ ದಿನಾಂಕ : 12-04-2023

ಮಂಗಳೂರು ಆರ್ಮಿ ನೇಮಕಾತಿ ಕೇಂದ್ರಕ್ಕೆ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯವರು ನೇಮಕಾತಿ ರ‍್ಯಾಲಿಗೆ ಹಾಜರಾಗಬೇಕಾಗುತ್ತದೆ.

ಬೆಂಗಳೂರು ಆರ್ಮಿ ನೇಮಕಾತಿ ಕೇಂದ್ರಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಲಾಪುರ, ಹಾಸನ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ಅಭ್ಯರ್ಥಿಗಳು ನೇಮಕಾತಿ ರ‍್ಯಾಲಿಗೆ ಭಾಗವಹಿಸಬೇಕಾಗುತ್ತದೆ.

ನೇಮಕಾತಿ ಹಂತಗಳು
ಹಂತ-1: ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ.
ಹಂತ-2: ನೇಮಕಾತಿ ರ‍್ಯಾಲಿ.

ಅಗ್ನಿವೀರರು ಹುದ್ದೆ ವಿಭಾಗವಾರು ಶೈಕ್ಷಣಿಕ ಅರ್ಹತೆಗಳು (ಎಲ್ಲಾ ರಕ್ಷಣಾ ಪಡೆಗಳು)
ಅಗ್ನಿವೀರ್ (ಜೆನೆರಲ್ ಡ್ಯೂಟಿ) : 10ನೇ ತರಗತಿ ಪಾಸ್.

ಅಗ್ನಿವೀರ್ (ಟೆಕ್ನಿಕಲ್) : ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ.
ಅಗ್ನಿವೀರ್ (ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್) : ಯಾವುದೇ ಸ್ಟ್ರೀಮ್‌ನಲ್ಲಿ ದ್ವಿತೀಯ ಪಿಯುಸಿ ಪಾಸ್.
ಅಗ್ನಿವೀರ್ (ಟ್ರೇಡ್ಸ್‌ಮನ್) : 8ನೇ ತರಗತಿ, 10ನೇ ತರಗತಿ ಪಾಸ್ ಮಾಡಿರಬೇಕು.

ಕನಿಷ್ಠ ವಯಸ್ಸಿನ ಅರ್ಹತೆ : 17 ವರ್ಷ 06 ತಿಂಗಳು.
ಗರಿಷ್ಠ ವಯಸ್ಸಿನ ಅರ್ಹತೆ : 21 ವರ್ಷ ಮೀರಿರಬಾರದು.
ಅಭ್ಯರ್ಥಿಗಳು ದಿನಾಂಕ 01-08-2002 ಮತ್ತು 01-04-2006 ರ ನಡುವೆ ಜನಿಸಿರಬೇಕು.

ಅಗ್ನಿವೀರರಿಗೆ ವೇತನ, ಭತ್ಯೆಗಳು
ಮೊದಲನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆಗಳು.
ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆಗಳು.
ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆಗಳು.
ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆಗಳು.

Leave a Reply

error: Content is protected !!