ಎಸ್‌ಎಸ್‌ಎಲ್‌ಸಿ ನಂತರ ಆಯ್ಕೆ ಮಾಡಬಹುದಾದ ಬೆಸ್ಟ್ ಕೋರ್ಸ್‌ಗಳ ಪಟ್ಟಿ ಇಲ್ಲಿದೆ..After SSLC

ಶೇರ್ ಮಾಡಿ

2023-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಇನ್ನೂ ಕೇವಲ 30 ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಆರಂಭಿಸಿದ್ದಾರೆ. ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಪರೀಕ್ಷೆಗಳು ಮಾರ್ಚ್ 31, 2023 ರಿಂದ ಆರಂಭವಾಗಲಿವೆ. ವಾರ್ಷಿಕ ಪರೀಕ್ಷೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿರುವ ಕಾರಣ ಎಲ್ಲ ವಿದ್ಯಾರ್ಥಿಗಳು ಕಠಿಣ ಅಭ್ಯಾಸ ನಡೆಸಿದ್ದಾರೆ. ಆದರೆ ಹಲವು ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಎಸ್‌ಎಸ್‌ಎಲ್‌ಸಿ/ 10ನೇ ತರಗತಿ ನಂತರ ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ಇರುತ್ತದೆ. ಹಲವು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ನಂತರ ಅನೇಕ ವಿದ್ಯಾರ್ಥಿಗಳ ಮೊದಲ ಆಯ್ಕೆ ಪಿಯುಸಿ ಆಗಿರುತ್ತದೆ. ಪಿಯುಸಿಯಲ್ಲಿ ಮೂರು ವಿಭಾಗಗಳಿದ್ದು ವಿದ್ಯಾರ್ಥಿಗಳು ಆ ಮೂರರಲ್ಲಿ ತಮಗೆ ಇಷ್ಟವಾದ ವಿಭಾಗವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಆರಂಭಿಸುತ್ತಾರೆ. ವಿದ್ಯಾರ್ಥಿಗಳಿಗೆ ಪಿಯುಸಿ ಬಿಟ್ಟು ಅನೇಕ ಡಿಪ್ಲೊಮ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿವೆ ಅವುಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದಾಗಿದೆ. ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕೆ ಇಲ್ಲಿ ಕೆಲವು ಕೋರ್ಸ್‌ಗಳ ಮಾಹಿತಿಯನ್ನು ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ನಂತರ ಎಲ್ಲರು ಮೊದಲು ಸಜೆಸ್ಟ್‌ ಮಾಡುವುದು ಪಿಯುಸಿ ಯನ್ನ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಬೇರೆಬೇರೆ ಕೋರ್ಸ್‌ಗಳಿಗೆ ಪ್ರವೇಶಾತಿಯನ್ನು ಪಡೆಯಬಹುದು. ಈ ಕೋರ್ಸ್‌ನಲ್ಲಿ ನೀವು ಮೂರು ವಿಭಾಗಗಳಲ್ಲಿ ಅಧ್ಯಯನ ಮಾಡಬಹುದಾಗಿದೆ. ಸೈನ್ಸ್ (ವಿಜ್ಞಾನ ವಿಭಾಗ), ಕಾಮರ್ಸ್(ವಾಣಿಜ್ಯ ವಿಭಾಗ), ಆರ್ಟ್ಸ (ಕಲಾ ವಿಭಾಗ), ಈ ಮೂರು ವಿಭಾಗಗಳಲ್ಲಿ ನಿಮಗೆ ಯಾವುದು ಸೂ​ಕ್ತ ಎನಿಸುತ್ತದೆ ಆ ಕೋರ್ಸ್‌ನಲ್ಲಿ ಅಧ್ಯಯನ ಮಾಡಬಹುದಾಗಿದೆ.

ಎಸ್‌ಎಸ್‌ಎಲ್‌ಸಿ ನಂತರ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿದರೆ ಉತ್ತಮ? ಇಲ್ಲಿದೆ ಲಿಸ್ಟ್​
ಅರೆವೈದ್ಯಕೀಯ ಕೋರ್ಸ್‌ಗಳು
ಅರೆವೈದ್ಯಕೀಯ ಕೋರ್ಸ್‌ಗಳು

ಡಿಪ್ಲೊಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ.
ಡಿಪ್ಲೊಮ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ.
ಡಿಪ್ಲೊಮ ಇನ್ ಹೆಲ್ತ್ ಇನ್‌ಸ್ಪೆಕ್ಟರ್.
ಡಿಪ್ಲೊಮ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ.

ಡಿಪ್ಲೊಮ ಕೋರ್ಸ್‌ಗಳು
ಡಿಪ್ಲೊಮ ಕೋರ್ಸ್‌ಗಳು

ಎಸ್‌ಎಸ್‌ಎಲ್‌ಸಿ ನಂತರ ಡಿಪ್ಲೊಮ ಇಂಜಿನಿಯರಿಂಗ್ ಮಾಡುವುದಕ್ಕೂ ನಿಮಗೆ ಅವಕಾಶವಿದೆ. ಅದಲ್ಲದೆ ​ಎಸ್‌ಎಸ್‌ಎಲ್‌ಸಿ ಜೊತೆಗೆ ಸರ್ಟಿಫಿಕೇಟ್ ಕೋರ್ಸ್ ಗಳು ಕೂಡಾ ಬೇಕಾಗಿದ್ದಲ್ಲಿ ಇಂಜಿನಿಯರಿಂಗ್‌ನಲ್ಲಿ ನೀವು ಡಿಪ್ಲೊಮ ಮಾಡಬಹುದು.

ಇಂಜಿನಿಯರಿಂಗ್ ಡಿಪ್ಲೊಮ ಕೋರ್ಸ್‌ಗಳು
ಡಿಪ್ಲೊಮ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್
ಡಿಪ್ಲೊಮ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
ಡಿಪ್ಲೊಮ ಇನ್ ಸಿವಿಲ್ ಇಂಜಿನಿಯರಿಂಗ್
ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್
ಎಂಜಿನಿಯರಿಂಗ್ ಡಿಪ್ಲೊಮ ಕೋರ್ಸ್‌ಗಳು.

SSLC, PUC ನಂತರ ಈ ಯೋಗ ಕೋರ್ಸ್‌ ಆಯ್ಕೆ ಮಾಡಿ.. ಆರೋಗ್ಯದ ಜೊತೆ ಬೇಗ ಉದ್ಯೋಗ​

ಡಿಪ್ಲೊಮ ಕೋರ್ಸ್‌ಗಳು
ಡಿಪ್ಲೊಮ ಕೋರ್ಸ್‌ಗಳು

ವಿದ್ಯಾರ್ಥಿಗಳು ಎಂಜಿನಿಯರಿಂಗ್ ಡಿಪ್ಲೊಮ ಕೋರ್ಸ್ ಅಲ್ಲದೆ ಬೇರೆ ಡಿಪ್ಲೊಮಾ ಕೋರ್ಸ್‌ಗಳನ್ನು ಕೂಡ ಆಯ್ಕೆ ಮಾಡುವುದಕ್ಕೆ ಅವಕಾಶವಿದೆ. ಆದರೆ ವಿದ್ಯಾರ್ಥಿಗಳು ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವಾಗ ಮೊದಲು ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸುವುದು ಉತ್ತಮ.

ಡಿಪ್ಲೊಮ ಇನ್ ಫಾರ್ಮಸಿ
ಡಿಪ್ಲೊಮ ಇನ್ ನರ್ಸಿಂಗ್ ಮತ್ತು ಮಿಡ್ ವೈಫರಿ
ಡಿಪ್ಲೊಮ ಇನ್ ಇಂಟೀರಿಯರ್ ಡಿಸೈನಿಂಗ್
ಡಿಪ್ಲೊಮ ಇನ್ ಪ್ರಿಂಟಿಂಗ್ ಟೆಕ್ನಾಲಜಿ
ಡಿಪ್ಲೊಮ ಟೂಲ್ ಆಂಡ್ ಡೈ ಮೇಕಿಂಗ್
ಡಿಪ್ಲೊಮ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ
ಡಿಪ್ಲೊಮ ಇನ್ ಪೌಲ್ಟ್ರಿ
ಡಿಪ್ಲೊಮ ಇನ್ ಲೆದರ್ ಟೆಕ್ನಾಲಜಿ
ಡಿಪ್ಲೊಮ ಇನ್ ಮ್ಯೂಸಿಕ್(ಕರ್ನಾಟಿಕ್ ಮತ್ತು ಸಂಗೀತ)
ಡಿಪ್ಲೊಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ
ಡಿಪ್ಲೊಮ ಇನ್ ಫುಡ್ ಟೆಕ್ನಾಲಜಿ.

ವಿದೇಶದಲ್ಲಿ ಅಧ್ಯಯನ ಮಾಡಲು ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ​

ಐಟಿಐ (ITI)

ಐಟಿಐ (ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್) ಕೋರ್ಸ್ ಅನ್ನು ಎಸ್‌ಎಸ್‌ಎಲ್‌ಸಿ ನಂತರ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದು ಎರಡು ವರ್ಷದ ಕೋರ್ಸ್‌ ಆಗಿದ್ದು ಈ ಕೋರ್ಸ್ ನಂತರ ಉನ್ನತ ವ್ಯಾಸಂಗವನ್ನು ಮುಂದುವರೆಸಬಹುದು. ಅನೇಕ ಡಿಪ್ಲೊಮ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಕೋರ್ಸ್‌ನ ನಂತರ ಖಾಸಗಿ ಕೈಗಾರಿಕಾ ಕಂಪನಿಗಳು ಮತ್ತು ಕೇಂದ್ರ, ರಾಜ್ಯ ಸರ್ಕಾರದ ಅಧಿನದ ಇಲಾಖೆಗಳು ಹಾಗೂ ಕೆಲವು ಸಚಿವಾಲಯಗಳಲ್ಲಿ ಉದ್ಯೋಗ ಅವಕಾಶ ಇದೆ.

Leave a Reply

error: Content is protected !!