ಕೌಕ್ರಾಡಿ ಬರೆಗುಡ್ಡೆ ನಿವಾಸಿ ನಿವೃತ್ತ ಎಎಸ್ಐ ಆಂತೋನಿ ವಿ.ಡಿ.ನಿಧನ

ಶೇರ್ ಮಾಡಿ

ನೆಲ್ಯಾಡಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಬರೆಗುಡ್ಡೆ ನಿವಾಸಿ, ನಿವೃತ್ತ ಎಎಸ್ಐ ಆಂತೋನಿ ವಿ.ಡಿ.(72ವ.) ರವರು ಅಲ್ಪ ಕಾಲದ ಅಸೌಖ್ಯದಿಂದ ಮಾರ್ಚ್ 2 ರಂದು ರಾತ್ರಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.
ಒಂದು ವಾರದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಆಂತೋನಿಯವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ಮಾರ್ಚ್ 2 ರಂದು ರಾತ್ರಿ ನಿಧನರಾದರು.

ಆಂತೋನಿ ಅವರು 1971 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಉಪ್ಪಿನಂಗಡಿ, ನೆಲ್ಯಾಡಿ ಹೊರಠಾಣೆ, ಕಡಬ, ಬೆಳ್ತಂಗಡಿ, ಬಂಟ್ವಾಳ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2008 ಏಪ್ರಿಲ್ 30ರಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎಎಸ್ಐ ಆಗಿದ್ದ ವೇಳೆ ನಿವೃತ್ತಿಯಾಗಿದ್ದರು.
ಮೃತರ ಪತ್ನಿ, ನಿವೃತ್ತ ಮುಖ್ಯ ಶಿಕ್ಷಕಿ ಅನ್ನಮ್ಮ, ಪುತ್ರರಾದ ಪೊಲೀಸ್ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಪುತ್ರ ವಿನೋದ್, ವಿಜೇಶ್ ಅವರನ್ನು ಅಗಲಿದ್ದಾರೆ.
ಮಾ.7ರಂದು ಅಂತ್ಯಕ್ರಿಯೆ:
ಮೃತರ ಅಂತ್ಯಕ್ರಿಯೆ ಮಾರ್ಚ್ 7ರಂದು ಸಂಜೆ 4 ಗಂಟೆಗೆ ನೆಲ್ಯಾಡಿ ಸೈಂಟ್ ಅಲ್ಪೋನ್ಸಾ ಚರ್ಚ್ ನಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

See also  ಕೊಣಾಲು-ಆರ್ಲ ಹಾ.ಉ.ಮಹಿಳಾ ಸಹಕಾರಿ ಸಂಘದ ನಿರ್ದೇಶಕಿ ಲೀಲಾವತಿ ಪಿ.ಹೆಚ್.ನಿಧನ

Leave a Reply

Your email address will not be published. Required fields are marked *

error: Content is protected !!