ಕಡಬ: ತಾಲೂಕಿನ ವಿವಿಧ ಭಾಗಗಳಲ್ಲಿ ಎ.25ರ ಸಂಜೆ ಸುರಿದ ಬಾರಿ ಮಳೆಗೆ ಮೆಸ್ಕಾಂ ಗೆ ಅಂದಾಜು 15 ರಿಂದ 20 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.
ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯದಲ್ಲಿ ಮರ ಮುರಿದು ಬಿದ್ದು ಬಸ್ ತಂಗುದಾಣ, ವಿದ್ಯುತ್ ಪರಿವರ್ತಕ ಸೇರಿದಂತೆ ಹಲವಾರು ಕಂಬಗಳು ಧರಶಾಹಿಯಾಗಿದೆ.
ಇನ್ನು ಇಲ್ಲಿನ ಉದನೆ ಸಮೀಪದ ಕಳಪ್ಪಾರು, ಶೆರ್ವತಡ್ಕ ಎಂಬಲ್ಲೂ ವಿದ್ಯುತ್ ಕಂಬಗಳು, ತಂತಿಗಳು ನೆಲಕ್ಕೆ ಉರುಳಿದೆ. ಈ ನಿಟ್ಟಿನಲ್ಲಿ ಮೆಸ್ಕಾಂ ನ ಅಧಿಕಾರಿಗಳು, ಸಿಬ್ಬಂದಿಗಳು ತುರ್ತು ಕೆಲಸಗಳಲ್ಲಿ ನಿರತರಾಗಿದ್ದಾರೆ. ಮರ ಬಿದ್ದ ಪರಿಣಾಮ ಒಂದು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು.
ಇಂದು ಸಂಜೆಯ ಒಳಗಡೆ ಕೆಲಸಗಳನ್ನು ಸಂಪೂರ್ಣ ಗೊಳಿಸಲಾಗುವುದು ಎಂದು ಕಡಬ ಮೆಸ್ಕಾಂನ ಎಇಟಿ ಸಜಿಕುಮಾರ್ ತಿಳಿಸಿದ್ದಾರೆ.