ಮದುವೆಗೂ ಮುನ್ನ ಜೀವನ ಸಂಗಾತಿಯ ಈ ವಿಚಾರಗಳು ತಿಳಿದಿರಲೇಬೇಕು..!

ಶೇರ್ ಮಾಡಿ

ಗರುಡ ಪುರಾಣದಲ್ಲಿ ಸುಖಮಯ ದಾಂಪತ್ಯ ಜೀವನದ ಕುರಿತು ಸಾಕಷ್ಟು ವಿಚಾರಗಳನ್ನು ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ, ವಿವಾಹಕ್ಕೂ ಮುನ್ನ ಜೀವನ ಸಂಗಾತಿಯ ಯಾವೆಲ್ಲಾ ವಿಚಾರಗಳನ್ನು ತಿಳಿದುಕೊಂಡಿರಬೇಕು.?
ನೀವು ಮದುವೆಯಾಗುವವರಾಗಿದ್ದರೆ ಅಥವಾ ನೀವು ಶೀಘ್ರದಲ್ಲೇ ಮದುವೆಯಾಗಲಿದ್ದರೆ, ಮದುವೆಗೆ ಮೊದಲು ನಿಮ್ಮ ಭವಿಷ್ಯದ ಜೀವನ ಸಂಗಾತಿಯ ಬಗ್ಗೆ ನೀವು ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕು. ಈ ವಿಷಯಗಳ ಬಗ್ಗೆ ಮೊದಲು ತಿಳಿದುಕೊಂಡರೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸಂತೋಷ ಮತ್ತು ಯಶಸ್ವಿ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಅನೇಕ ನಿಗೂಢ ವಿಷಯಗಳನ್ನು ಗರುಡ ಪುರಾಣ ಪುಸ್ತಕದಲ್ಲಿ ಹೇಳಲಾಗಿದೆ. ಆದರೆ ಸಾಮಾನ್ಯವಾಗಿ ಜನರು ಇದನ್ನು ಸಾವಿನ ನಂತರ ಮಾತ್ರ ಓದುವ ಪುಸ್ತಕವೆಂದು ಪರಿಗಣಿಸುತ್ತಾರೆ.
ಆದರೆ ಗರುಡ ಪುರಾಣದಲ್ಲಿ ಮರಣ, ಮೋಕ್ಷ, ಪಾಪ-ಪುಣ್ಯ, ಸ್ವರ್ಗ, ನರಕ ಮತ್ತು ಪುನರ್ಜನ್ಮದ ಜೊತೆಗೆ ದೈನಂದಿನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಹೇಳಲಾಗಿದೆ. ಅವುಗಳನ್ನು ಅನುಸರಿಸುವ ಮೂಲಕ ನೀವು ಸಾಕಷ್ಟು ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಗರುಡ ಪುರಾಣ ಪುಸ್ತಕದಲ್ಲಿ ಸೂಕ್ತ ಜೀವನ ಸಂಗಾತಿಯ ಬಗ್ಗೆಯೂ ಹೇಳಲಾಗಿದೆ. ಈ ಪುಸ್ತಕದ ಪ್ರಕಾರ, ಮದುವೆಗೆ ಮೊದಲು, ನಿಮ್ಮ ಭವಿಷ್ಯದ ಜೀವನ ಸಂಗಾತಿಯ ಬಗ್ಗೆ ನೀವು ಕೆಲವು ವಿಷಯಗಳನ್ನು ತಿಳಿದಿರಬೇಕು. ಮದುವೆಗೂ ಮುನ್ನ ಈ ವಿಷಯಗಳನ್ನು ತಿಳಿದುಕೊಂಡರೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಮತ್ತು ಕುಟುಂಬದಲ್ಲಿ ವಿರಹ, ವೈಮನಸ್ಸು ಉಂಟಾಗುವುದಿಲ್ಲ. ಅಂತಹ ವಿಷಯಗಳಾವುವು ನೋಡೋಣ.

ಧರ್ಮ
ಮದುವೆಗೆ ಮೊದಲು, ನಿಮ್ಮ ಭವಿಷ್ಯದ ಜೀವನ ಸಂಗಾತಿಯ ಧರ್ಮದ ಬಗ್ಗೆ ನೀವು ತಿಳಿದಿರಬೇಕು. ಇದು ವೈವಾಹಿಕ ಜೀವನಕ್ಕೆ ಹಾಗೂ ಕುಟುಂಬ ಮತ್ತು ಸಾಮಾಜಿಕ ಜೀವನಕ್ಕೆ ಬಹಳ ಮುಖ್ಯವಾಗಿದೆ. ವಿವಾಹವಾದ ಬಳಿಕ ಜೀವನ ಸಂಗಾತಿಯ ಧರ್ಮವನ್ನು ತಿಳಿದು ಬೇಸರ ಪಟ್ಟುಕೊಳ್ಳುವುದರಿಂದ ವಿವಾಹಕ್ಕೂ ಮುನ್ನ ಅವರ ಧರ್ಮವನ್ನು ತಿಳಿದುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಡುವುದು ಉತ್ತಮ. ಇದು ನಿಮ್ಮ ವೈವಾಹಿಕ ಜೀವನವನ್ನು ಅರ್ಥಪೂರ್ಣವಾಗಿರಿಸುತ್ತದೆ.

ತಾಳ್ಮೆ
ತಾಳ್ಮೆ ಮತ್ತು ಸಂಯಮ ಹೊಂದಿರುವ ವ್ಯಕ್ತಿಯು ತನ್ನ ಕುಟುಂಬವನ್ನು ಪ್ರತಿ ಕಷ್ಟದ ಪರಿಸ್ಥಿತಿಯಲ್ಲೂ ಉಳಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದ, ಮದುವೆಗೆ ಮೊದಲು, ನಿಮ್ಮ ಸಂಗಾತಿಗೆ ತಾಳ್ಮೆ ಅಥವಾ ಸ್ವಯಂ ನಿಯಂತ್ರಣವಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು. ತಾಳ್ಮೆ ಮತ್ತು ಸಂಯಮವಿರುವ ವ್ಯಕ್ತಿಯನ್ನು ವಿವಾಹವಾಗುವುದು ಉತ್ತಮ.

ಕೋಪ
ಕೋಪಗೊಂಡ ವ್ಯಕ್ತಿಯು ತನ್ನ ನಡವಳಿಕೆಯಿಂದ ಎಲ್ಲಾ ಸಂಬಂಧಗಳನ್ನು ಕಳೆದುಕೊಳ್ಳುತ್ತಾನೆ. ಅದಕ್ಕಾಗಿಯೇ ಮದುವೆಗೆ ಮೊದಲು, ನಿಮ್ಮ ಜೀವನ ಸಂಗಾತಿಯ ಈ ಸ್ವಭಾವವನ್ನು ಖಂಡಿತವಾಗಿ ಪರಿಶೀಲಿಸಬೇಕು. ಕೋಪವು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಬಿರುಕು ತರುತ್ತದೆ ಮತ್ತು ಅತಿಯಾದ ಕೋಪವುಳ್ಳ ಸ್ತ್ರೀ ಅಥವಾ ಪುರುಷನು ಕಟುವಾದ ಮಾತಿನ ಮೂಲಕ ತನ್ನ ಜೀವನ ಸಂಗಾತಿಗೆ ನೋವನ್ನು ನೀಡುತ್ತಾರೆ.

ಮಧುರವಾದ ಮಾತು
ಮಧುರವಾದ ಅಥವಾ ಸೂಕ್ಷ್ಮವಾದ ಮಾತುಗಳಿಂದ ನೀವು ಎಲ್ಲರ ಹೃದಯವನ್ನು ಗೆಲ್ಲಬಹುದು. ಜೀವನ ಸಂಗಾತಿಯಲ್ಲಿ ಈ ಗುಣವಿದ್ದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹಾಗಾಗಿ ಮಧುರವಾದ ಅಥವಾ ಸಿಹಿಯಾದ ಮಾತುಗಳನ್ನಾಡುವ ಜೀವನ ಸಂಗಾತಿಯನ್ನು ಆಯ್ದುಕೊಳ್ಳಿ.

ಪತಿ ಪತ್ನಿಯನ್ನು, ಪತ್ನಿ ಪತಿಯನ್ನು ಅವಮಾನಿಸಬಾರದು
ಮಹಿಳೆಯರು ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸಬೇಕು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಯಾವುದೇ ವ್ಯಕ್ತಿಯೊಂದಿಗೆ ಅದರಲ್ಲೂ ಪತಿಯೊಂದಿಗೆ ಎಂದಿಗೂ ಕಠಿಣ ಪದಗಳನ್ನು ಬಳಸಿ ಮಾತನಾಡಬಾರದು. ತಾನು ವಿವಾಹವಾಗಿ ಹೋದ ಮನೆಯಲ್ಲಿ ಚಿಕ್ಕವರಿರಲಿ, ದೊಡ್ಡವರಿರಲಿ ಎಲ್ಲರೊಂದಿಗೂ ಚೆನ್ನಾಗಿ ಮಾತನಾಡಬೇಕು. ಯಾರಿಗೂ ತಪ್ಪು ಪದಗಳನ್ನು ಬಳಸಿ ಮಾತನಾಡಬಾರದು.

Leave a Reply

error: Content is protected !!