ಜಿಮ್‌ನಲ್ಲಿ ಭಾರ ಎತ್ತಲು ಹೋಗಿ ಕುತ್ತಿಗೆ ಮುರಿತ; ಯುವ ಜಿಮ್‌ ಟ್ರೈನರ್‌ ಮೃತ್ಯು

ಶೇರ್ ಮಾಡಿ

ಜಿಮ್‌ನಲ್ಲಿ ಭಾರ ಎತ್ತುವಾಗ ಕುತ್ತಿಗೆ ಮುರಿದು ಫಿಟ್‌ನೆಸ್ ಟ್ರೈನರ್‌ ಯೊಬ್ಬರು ಮೃತಪಟ್ಟಿರುವ ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
ಜು.15 ರಂದು ಈ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.
ಇಂಡೋನೇಷ್ಯಾದ 33 ವರ್ಷದ ಫಿಟ್‌ನೆಸ್ ಟ್ರೈನರ್‌ ಜಸ್ಟಿನ್ ವಿಕ್ಕಿ ಜಿಮ್‌ ನಲ್ಲಿ ಬಾರ್ಬೆಲ್‌ ಎತ್ತಲು ಹೋಗಿದ್ದಾರೆ. ಇದು 210ಕ ಕೆಜಿ ಇದ್ದು, ಶಕ್ತಿ ಮೀರಿ ಇದನ್ನು ಎತ್ತಲು ಜಸ್ಟಿನ್‌ ಯತ್ನಿಸಿದ್ದಾರೆ. ಭುಜದ ಮೇಲೆ ಭಾರೀ ಗಾತ್ರದ ಬಾರ್ಬೆಲ್‌ ಎತ್ತುವ ವೇಳೆ ಇಬ್ಬರು ಸಹಾಯಕರು ಅವರ ಹಿಂದೆ ನಿಂತಿದ್ದಾರೆ. ಆದರೆ ಭಾರ ಎತ್ತುವಾಗ ಕೂತು ಏಳುವ ವೇಳೆ ಬಾರ್ಬೆಲ್‌ ಸಹಾಯಕರ ಕೈಯಿಂದ ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ಅದು ಜಸ್ಟಿನ್‌ ಅವರ ಕುತ್ತಿಗೆ ಮೇಲಿಂದ ಜಾರಿದೆ. ಪರಿಣಾಮ ಜಸ್ಟಿನ್‌ ಅಲ್ಲೇ ಪ್ರಜ್ಞೆ ತಪ್ಪಿದ್ದಾರೆ.
ಅಪಘಾತದ ಪರಿಣಾಮವಾಗಿ ಜಸ್ಟಿನ್ ವಿಕ್ಕಿ ಅವರು ಕುತ್ತಿಗೆ ಮುರಿದು ಮತ್ತು ಅವರ ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಪರ್ಕ ಹೊಂದಿದ ಪ್ರಮುಖ ನರಗಳಿಗೆ ಏಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ನಡೆಸಿದರೂ ಅವರು ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ.

Leave a Reply

error: Content is protected !!