ಭಾರೀ ಸುಳಿಗಾಳಿಗೆ ತತ್ತರ : ಹಲವು ಮನೆಗಳಿಗೆ ಹಾನಿ

ಶೇರ್ ಮಾಡಿ

ವಿಟ್ಲ: ಅಳಿಕೆ ಗ್ರಾಮದ ವಧ್ವ, ಕಾನತ್ತಡ್ಕ, ಕೊಳೆಂಜಿಮಾರು ಭಾಗದಲ್ಲಿ ಭಾರೀ ಸುಳಿಗಾಳಿಗೆ ಜನ ತತ್ತರಿಸಿ ಹೋಗಿದ್ದಾರೆ. ಹಲವು ಮನೆ, ದನದ ಹಟ್ಟಿ, ಕೊಟ್ಟಿಗೆ, ವಿದ್ಯುತ್ ಕಂಬಗಳು ಹಾನಿಗೊಳಗಾಗಿದೆ.
ಅಳಿಕೆ ಗ್ರಾಮದ ವಧ್ವ ನಿವಾಸಿಗಳಾದ ಗೋಪಾಲಕೃಷ್ಣ ನಾವುಡ, ನರಸಿಂಹ ನಾವುಡ, ರಾಮ ಬೆಳ್ಚಾಡ, ಕೊಳೆಂಜಿಮಾರು ನಿವಾಸಿ ಚಂದ್ರಶೇಖರ ನಾಯ್ಕ, ಕಾನತ್ತಡ್ಕ ನಿವಾಸಿ ಅಬ್ದುಲ್ ರಝಾಕ್ ಅವರ ಮನೆ ಹಾಗೂ ಉಪಕಟ್ಟಡಗಳಿಗೆ ಹಾನಿಯಾಗಿದೆ.
ಇಬ್ಬರ ಮನೆಗಳು ಭಾಗಶಃ ಸಂಪೂರ್ಣ ಹಾನಿಯಾಗಿದ್ದು, ಉಳಿದ ಇಬ್ಬರ ಮನೆಗಳು ಹಾನಿಗೊಳಗಾಗಿದೆ. ಸುಳಿಗಾಳಿಯ ಅವಾಂತರಕ್ಕೆ ಮರಗಳು ಮನೆ ಹಾಗೂ ಕಟ್ಟಡಗಳ ಮೇಲೆ ಎಸೆಯಲ್ಪಟ್ಟಿದೆ.
ಸ್ಥಳಕ್ಕೆ ಅಳಿಕೆ ಗ್ರಾಮ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

error: Content is protected !!