ಹುಷಾರ್! ಬೆತ್ತಲು ಮಾಡುತ್ತಿದೆ; ವಿಡಿಯೋ ಕರೆ ಬಗ್ಗೆ ಎಚ್ಚರವಾಗಿರಿ!- ಬಲಿಪಶುಗಳಾಗುತ್ತಿದ್ದಾರೆ !

ಶೇರ್ ಮಾಡಿ

ಮಂಗಳೂರು: ಇಂಟರ್‌ನೆಟ್‌ ಕರೆ ಅಥವಾ ಅಪರಿಚಿತ ನಂಬರ್‌ನಿಂದ ವಿಡಿಯೋ ಕಾಲ್‌ ಬಂದರೆ ಯಾವತ್ತೂ ರಿಸೀವ್‌ ಮಾಡಬೇಡಿ. ಒಂದು ವೇಳೆ ಕರೆ ಸ್ವೀಕರಿಸಿ ನೀವು ಮಾತನಾಡಿದರೆ, ಕರೆ ಕಟ್‌ ಆದ ಕೆಲವೇ ನಿಮಿಷದಲ್ಲಿ ನಿಮ್ಮ ಮೊಬೈಲ್‌ಗೆ ನೀವು ಬೆತ್ತಲಾಗಿರುವ ವಿಡಿಯೋ, ಫೋಟೋ ಕ್ಲಿಪ್ಪಿಂಗ್‌ಗಳು ಬರುತ್ತವೆ ! ಈ ರೀತಿ ದೊಡ್ಡ ಮಟ್ಟದ ಜಾಲವೊಂದು ಸಕ್ರಿಯವಾಗಿದ್ದು, ಇದಕ್ಕೆ ನೂರಾರು ಮಂದಿ ಬಲಿಪಶುಗಳಾಗುತ್ತಿದ್ದಾರೆ !
ಆಧುನಿಕ ಯುಗದಲ್ಲಿ ತಾಂತ್ರಿಕತೆ ಬೆಳೆದಷ್ಟು ಆನ್‌ಲೈನ್‌ ವಂಚನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆನ್‌ಲೈನ್‌ ವಂಚಕರು ಮುಗ್ಧ ಜನರನ್ನು ಟಾರ್ಗೆಟ್‌ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಬೆಳ್ಳಂಬೆಳಗ್ಗೆ ಅಥವಾ ತಡರಾತ್ರಿ ಅನಾಮಿಕ ಮೊಬೈಲ್‌ನಿಂದ ವಿಡಿಯೋ ಕರೆ ಬರುತ್ತದೆ. ಕರೆ ಸ್ವೀಕರಿಸಿದರೆ ಅತ್ತ ಕಡೆಯಿಂದ ಬೆತ್ತಲೆಯಾಗಿರುವ ಯುವತಿಯೊಬ್ಬಳು ಸಂಭಾಷಣೆ ಆರಂಭಿಸುತ್ತಾಳೆ. ಒಂದು ವೇಳೆ ಕರೆ ಸ್ವೀಕರಿಸಿದ ವ್ಯಕ್ತಿ ಅದಕ್ಕೆ ತಕ್ಕಂತೆ ಪ್ರತಿಸ್ಪಂದನೆ ನೀಡಿದರೆ ಅದೆಲ್ಲವನ್ನೂ ರೆಕಾರ್ಡ್‌ ಮಾಡಲಾಗುತ್ತದೆ. ಇದಾದ ಬಳಿಕ ಅಪರಿಚಿತ ಯುವತಿ ಕಾಲ್‌ ಕಟ್‌ ಮಾಡುತ್ತಾಳೆ. ಇದಾದ ಕೆಲವೇ ನಿಮಿಷದಲ್ಲಿ ಕರೆ ಸ್ವೀಕರಿಸಿದ ವ್ಯಕ್ತಿಯ ಮೊಬೈಲ್‌ಗೆ ಯುವತಿ ಜತೆ ಸಂಭಾಷಣೆ ಮಾಡಿದ ವಿಡಿಯೋಗಳನ್ನು (ಇಬ್ಬರನ್ನು ಬೆತ್ತಲುಗೊಳಿಸಿ ಎಡಿಟ್‌ ಮಾಡಿದ ವಿಡಿಯೋ) ಕಳುಹಿಸಲಾಗುತ್ತದೆ.
ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ

ವಾಟ್ಸ್‌ಆ್ಯಪ್‌ ವಿಡಿಯೋ ಕರೆ ಮಾಡಿದ ಯುವತಿ ಬಳಿಕ ವಾಟ್ಸ್‌ಆ್ಯಪ್‌ ಮೂಲಕ ಸಂದೇಶ ಹಾಕಿ ಲಕ್ಷಾಂತರ ರೂ. ಹಣದ ಬೇಡಿಕೆಯಿಟ್ಟು, ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣ, ಮೊಬೈಲ್‌ ಮೊಬೈಲ್ ಕಾಂಟ್ಯಾಕ್ಟ್‌ನಲ್ಲಿರುವ ಸಂಬಂಧಿಕರು ಹಾಗೂ ಇತರ ವ್ಯಕ್ತಿಗಳಿಗೆ ಕಳುಹಿಸುವುದಾಗಿ ಬೆದರಿಸುತ್ತಾಳೆ. ಇದರಿಂದ ಕೆಲವರು ವಿಚಲಿತರಾಗಿ ಮರ್ಯಾದೆಗೆ ಅಂಜಿ ಲಕ್ಷಾಂತರ ರೂ. ವರ್ಗಾಯಿಸಿದ್ದಾರೆ. ಒಂದು ಬಾರಿ ಹಣ ನೀಡಿದರೆ ಯುವತಿ ಪದೇ ಪದೇ ಹಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್‌ ಮೇಲ್‌ ಮಾಡುತ್ತಾಳೆ. ಇದು ದೊಡ್ಡ ಮಟ್ಟದ ಜಾಲವಾಗಿದೆ.
ಪೊಲೀಸ್‌ ಠಾಣೆಗೆ ದೂರು ನೀಡಿ
ಅಪರಿಚಿತ ಯುವತಿ ವಿಡಿಯೋ ಕರೆ ಮಾಡಿ ವಂಚನೆಗೆ ಸಿಲುಕಿಸುವ ಪ್ರಕರಣದಲ್ಲಿ ಕೂಡಲೇ ಪೊಲೀಸ್‌ ಠಾಣೆಗೆ ದೂರು ನೀಡಿ ಕೇಸು ದಾಖಲಿಸಬೇಕು. ಯುವತಿ ಬೆದರಿಸಲು ಕರೆ ಮಾಡುವ ಮೊಬೈಲ್‌ ನಂಬರ್‌ನ್ನು ಬ್ಲ್ಯಾಕ್‌ ಮಾಡುವ ಮೂಲಕ ಸೆಡ್ಡು ಹೊಡೆಯಬಹುದಾಗಿದೆ.

ವಿಡಿಯೋ ಕರೆ ಬಗ್ಗೆ ಎಚ್ಚರವಾಗಿರಿ!

  • ಅಪರಿಚಿತ ನಂಬರ್‌, ಇಂಟರ್‌ನೆಟ್‌ನಿಂದ ವಿಡಿಯೋ ಕರೆ ಬಂದರೆ ಯಾವುದೇ ಕಾರನ್ನೂ ರಿಸೀವ್‌ ಮಾಡಬೇಡಿ.
  • ಲೋನ್‌ ಆ್ಯಪ್‌ನಲ್ಲಿಯಾವತ್ತೂ ಸಾಲ ಪಡೆಯುವ ಸಾಹಸಕ್ಕೆ ಕೈ ಹಾಕಬೇಡಿ.
  • ಗಂಡಸರು ಯುವತಿಯರ ಡಿಪಿಯನ್ನಾಗಿ ಯಮಾರಿಸುತ್ತಾರೆ, ಜಾಗರೂಕರಾಗಿರಿ !.
  • ಅಪರಿಚಿತ ವ್ಯಕ್ತಿಗಳ ಜತೆ ಯಾವುದೇ ಕಾರಣಕ್ಕೂ ಸಲುಗೆಯಿಂದ ಮಾತನಾಡಬೇಡಿ.
  • ನಿಮ್ಮ ಖಾಸಗಿ ಫೋಟೋ, ವೀಡಿಯೋ, ಸಂಭಾಷಣೆಗಳನ್ನು ಶೇರ್‌ ಮಾಡಬೇಡಿ.
  • ನಿಮ್ಮ ಬ್ಯಾಂಕ್‌ ಖಾತೆ, ಒಟಿಪಿ ಸೇರಿದಂತೆ ಯಾವುದೇ ಮಾಹಿತಿಗಳನ್ನು ವಿನಿಮಯ ಮಾಡಬೇಡಿ.
  • ಅಪರಿಚಿತ ವ್ಯಕ್ತಿಗಳಿಂದ ವಿಪರೀತ ಕಿರಿಕಿರಿಯಾದಾಗ ಕೂಡಲೇ ನಿಮ್ಮ ಮೊಬೈಲ್‌ ಸಂಪರ್ಕವನ್ನೇ ಕಡಿತಗೊಳಿಸಿ.

Leave a Reply

error: Content is protected !!