ಇಚಿಲಂಪಾಡಿ: ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ

ಶೇರ್ ಮಾಡಿ

ಇಚಿಲಂಪಾಡಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ ಶ್ರೀ ಆನಂದ ಆಶ್ರಮ ಸೇವಾ ಟ್ರಸ್ಟ್(ರಿ). ಪುತ್ತೂರು ಮತ್ತು ಕೌಕ್ರಾಡಿ ಗ್ರಾಮ ಪಂಚಾಯತ್ ಲಯನ್ಸ್ ಕ್ಲಬ್ ದುರ್ಗಾಂಬಾ ಅಲಂಕಾರ್ ಜೆ ಸಿ ಐ ಸಂಸ್ಥೆ ನೆಲ್ಯಾಡಿ ಇವುಗಳ ಆಶ್ರಯದಲ್ಲಿ ಜಿಲ್ಲಾ ಅಂದತ್ವ ನಿವಾರಣಾ ಸಂಸ್ಥೆ ಮಂಗಳೂರು ವೆನ್ ಲಾಕ್ ಆಸ್ಪತ್ರೆ, ಮಂಗಳೂರು ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಇವರ ಸಹಯೋಗದೊಂದಿಗೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ನೇರ್ಲ ಇಚಿಲಂಪಾಡಿ ಇಲ್ಲಿ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಮತ್ತು ಆನಂದಾಶ್ರಮ ಸೇವಾ ಟ್ರಸ್ಟ್ ವತಿಯಿಂದ ಉಚಿತ ಕನ್ನಡಕ ವಿತರಣೆ ಜರಗಿತ್ತು.

ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಇಚಿಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರರು ಆದ ಶುಭಕರ ಹೆಗ್ಗಡೆ ಮಾತನಾಡಿ ಪಂಚೇಂದ್ರಿಯಗಳಲ್ಲಿ ಕಣ್ಣು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಗ್ರಾಮೀಣ ಭಾಗಗಳಲ್ಲಿ ಇಂತಹ ಚಿಕಿತ್ಸೆಗಳನ್ನು ನಡೆಸುವುದರಿಂದ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದೆ, ಈ ಶಿಬಿರ ಎಲ್ಲರಿಗೂ ಬೆಳಕನ್ನು ಕೊಡಲಿ ಆ ಮೂಲಕ ಅಂದತ್ವ ನಿವಾರಣೆಯಾಗಲಿ ಎಂದು ಶುಭ ಹಾರೈಸಿದರು.

ಶಿಬಿರದಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿಗಳಾದ ಡಾ.ಅನಿಲ್ ರಾಮಾನುಜಂ ಶಿಬಿರದ ಉಪಯುಕ್ತತೆಯ ಬಗ್ಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಪ್ರಶಾಂತ ಮನವಳಿಕೆ ಗುತ್ತು ರವರು ಮಾತನಾಡಿ ಜನರ ಸೇವೆಯೇ ಲಯನ್ಸ್ ಕ್ಲಬ್ ನ ಉದ್ದೇಶವಾಗಿದೆ ಇಂತಹ ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳ ಮೂಲಕ ಜನರಿಗೆ ನಿಜವಾದ ಸೇವೆಯನ್ನು ಕೊಟ್ಟಂತಾಗುತ್ತದೆ ಈ ಮೂಲಕ ಅಂತರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ನ ಧ್ಯೇಯೋದ್ದೇಶಗಳು ಸಾಕಾರಗೊಳ್ಳುತ್ತದೆ ಎಂದರು.
ನೆಲ್ಯಾಡಿ ಜೆಸಿಐ ಸಂಸ್ಥೆಯ ಅಧ್ಯಕ್ಷರು ನೆಲ್ಯಾಡಿ ಸೇವಾ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ದಯಾಕರ ಮುಂಡಾಲಗುತ್ತು ರವರು ಮಾತನಾಡಿ ಕಳೆದ 15 ವರ್ಷಗಳಿಂದ ಅನೇಕ ಶಿಬಿರಗಳನ್ನು ಸಂಘಟಿಸಿ ಜನರಿಗೆ ಆರೋಗ್ಯ ಸೇವೆ ಮತ್ತು 48 ಕಣ್ಣಿನ ಶಿಬಿರಗಳ ಮೂಲಕ ಜನಪರ ಸೇವೆಯನ್ನು ಮಾಡಿದ ಗಂಗಾಧರ ಶೆಟ್ಟಿ ಹೊಸಮನೆ ರವರ ಸೇವೆ ಸಾರ್ಥಕವಾಗಿದೆ ಮತ್ತು ಈ ಶಿಬಿರದಲ್ಲಿ ನಮ್ಮ ಜೆಸಿಐ ಸಂಸ್ಥೆ ತೊಡಗಿಸಿಕೊಂಡಿರುವುದು ನನಗೆ ಬಹಳಷ್ಟು ಸಂತೋಷವನ್ನು ತಂದಿದೆ ಎಂದರು ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪುತ್ತೂರು ತಾಲೂಕ್ ಇದರ ನಿಕಟ ಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಹಾರ್ಫಳ ಮತ್ತು ಕೌಕ್ರಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಉದಯಕುಮಾರ್ ಗೌಡ ದೋಂತಿಲ್ಲ ಮತ್ತು ಕೌಕ್ರಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರೋಯಿ ಟಿ.ಎಂ ಶಾಲಾ ಮುಖ್ಯ ಗುರು ಶ್ರೀಮತಿ ಜಯಶ್ರೀ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಸಂತ ಬಿಜೇರು ಆನಂದಾಶ್ರಮ ಸೇವಾ ಟ್ರಸ್ಟ್ ನ ಮುಖ್ಯಸ್ಥರಾದ ಸದಾಶಿವ ಪೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ಶಿಬಿರಗಳ ಮೂಲಕ ಸಾವಿರಾರು ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಿ ಸಮಾಜ ಸೇವೆ ಮಾಡುತ್ತಾ ಇರುವ ಹಿರಿಯರಾದ ಡಾ.ಗೌರಿ ಪೈ ರವರಿಗೆ ಮಾಡುವ ಸನ್ಮಾನವನ್ನು ಸದಾಶಿವ ಪೈ ರವರಿಗೆ ನೀಡಲಾಯಿತು. 48ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆರವರು ಪ್ರಾಸ್ತಾವಿಕ ಮಾತುಗಳನಾಡಿ ಜನಸೇವೆಯೇ ಜನಾರ್ಧನ ಸೇವೆಯಾಗಿದೆ ಇಚ್ಚಿಲಂಪಾಡಿಯಲ್ಲಿ ನಡೆದ ಈ ಶಿಬಿರ ಈ ಮಣ್ಣಿನ ದೈವ ದೇವರುಗಳ ಆಶೀರ್ವಾದದಿಂದ ಯಶಸ್ವಿಯಾಗಿದೆ ಸರಕಾರದಿಂದ ನಡೆಸಲ್ಪಡುವ ಇಂತಹ ಶಿಬಿರಗಳು ಜನರ ನಂಬಿಕೆಯನ್ನು ಉಳಿಸಿಕೊಂಡಿದೆ ಎಂದರು ನೆಲ್ಯಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಸುಧೀರ್ ಕುಮಾರ್ ಧನ್ಯವಾದಗಳು ನೀಡಿದರು. ಶಿಬಿರದಲ್ಲಿ 200 ಕ್ಕೂ ಮಿಕ್ಕಿ ಸಾರ್ವಜನಿಕರು ಕಣ್ಣಿನ ತಪಾಸಣೆಯನ್ನು ಮಾಡಿಸಿಕೊಂಡರು 15 ಜನ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು ಆನಂದಾಶ್ರಮ ಸೇವಾ ಟ್ರಸ್ಟ್ ನ ವತಿಯಿಂದ 180 ಕನ್ನಡಕಗಳನ್ನು ಉಚಿತವಾಗಿ ನೀಡಲಾಯಿತು.

Leave a Reply

error: Content is protected !!