ಕಾಡಾನೆ ದಾಳಿಗೆ ಅಪಾರ ಕೃಷಿ ನಾಶ

ಶೇರ್ ಮಾಡಿ

ಶಿಶಿಲ: ಇಲ್ಲಿಯ ಕಳ್ಳಾಜೆಯ ನಿವಾಸಿ ದಿವಾಕರ ಗೌಡ ಇವರ ತೋಟದಲ್ಲಿ ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಕೃಷಿ ಬೆಳೆ ನಾಶವಾಗಿದೆ.

ರಾತ್ರಿ ವೇಳೆ ತೋಟಕ್ಕೆ ಸುಮಾರು 3 ಆನೆಗಳು ನುಗ್ಗಿ 75 ಈಗಷ್ಟೆ ಫಸಲು ಬಿಡುವ ಅಡಿಕೆ ಗಿಡ 50 ಬಾಳೆಗಿಡ 4 ತೆಂಗಿನ ಗಿಡವನ್ನು ಬುಡದಿಂದಲೇ ಮುರಿದು ನಾಶಮಾಡಿದೆ. ಕುಡಿಯಲು ಇವರು ಕಾಡಿನ ನೀರನ್ನು ಅವಲಂಬಿಸಿದ್ದು ಇದರ ಪೈಪುಗಳನ್ನು ಕಾಡಾನೆ ನಾಶ ಪಡಿಸಿದೆ. ಒಟ್ಟಾರೆ ಕಾಡಾನೆ ಧಾಳಿಯಿಂದ ದಿವಾಕರ ಗೌಡ ಇವರ ಮನೆಯವರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ಶಾಲೆಗೆ ಹೋಗುವ ಮಕ್ಕಳು ಭಯಭೀತರಾಗಿದ್ದಾರೆ. ಕಳೆದ 3 ತಿಂಗಳ ಹಿಂದೆ ಇದೇ ಜಾಗದಲ್ಲಿ ಕಾಡಾನೆ ದಾಳಿ ಮಾಡಿ ಅಪಾರ ಕೃಷಿಯನ್ನು ನಾಶಮಾಡಿರುತ್ತದೆ ಅರಣ್ಯ ಇಲಾಖೆಯ ಗಮನಕ್ಕೆ ಇವರು ತಿಳಿಸಿದ್ದು ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪರಿಹಾರ ಭರವಸೆಯನ್ನು ನೀಡಿರುತ್ತಾರೆ.

Leave a Reply

error: Content is protected !!