ನೇಸರ ಜ.16:ಅರಸಿನಮಕ್ಕಿ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಸಮೀಪದ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದ ಗರ್ಭಗುಡಿಯ ಭವ್ಯ ಶಿಲಾ ಮೆರವಣಿಗೆ ಜ.16 ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಕಾಪು ಉಪ್ಪರಡ್ಕ ದೈವಸ್ಥಾನದ ಬಳಿಯಲ್ಲಿ ಕ್ಷೇತ್ರದ ಅರ್ಚಕ ನಾರಾಯಣ ಅಭ್ಯಂಕರ್ ಶಿಲೆಗಳಿಗೆ ವಿಶೇಷ ಪೂಜೆ ನಡೆಸಿ ಸ್ವಾಗತಿಸಿದರು.ಕೊಕ್ಕಡದ ಹಿರಿಯ ವೈದ್ಯರಾದ ಡಾ|ಮೋಹನದಾಸ ಗೌಡ ಪುಷ್ಪಾರ್ಚನೆಯನ್ನು ನಡೆಸಿ ಮೆರವಣಿಗೆಗೆ ಚಾಲನೆ ನೀಡಿದರು.
ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಳದ ಬಳಿ ಆಡಳಿತ ಮೊಕ್ತೇಸರರಾದ ಎಂ.ಪಿ.ರಾಜಗೋಪಾಲ್ ರವರು ವಿಶೇಷ ಪೂಜೆ ನಡೆಸಿದರು.ಸುಮಾರು 3 ಕಿ.ಮೀ.ದೂರದ ಈ ಮೆರವಣಿಗೆಯಲ್ಲಿ ಚೆಂಡೆ ಸೇವೆ,ಬೈಕ್- ವಾಹನ ಜಾಥಾ ಹಾಗೂ ನೂರಾರು ಮಹಿಳೆಯರು ಪೂರ್ಣ ಕುಂಭ ಹಿಡಿದು ಸಾಗಿ ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿದರು. ಶಾಸಕ ಹರೀಶ್ ಪೂಂಜ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ,ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಬಾರಿಗ,ಜಯರಾಮ ನೆಲ್ಲಿತ್ತಾಯ ಶಿಶಿಲ, ವಿಹಿಂಪ ಮುಖಂಡ ನವೀನ್ ನೆರಿಯ,ಅರಸಿನಮಕ್ಕಿ ಪಂ.ಅಧ್ಯಕ್ಷ ನವೀನ್ ರೆಖ್ಯ, ಉಪಾಧ್ಯಕ್ಷೆ ಶಕುಂತಲಾ, ಶಿಶಿಲ ಪಂ.ಅಧ್ಯಕ್ಷ ಸಂದೀಪ್ ಅಮ್ಮುಡಂಗೆ,ಅರಸಿನಮಕ್ಕಿ ಸೊಸೈಟಿ ಉಪಾಧ್ಯಕ್ಷ ರಾಜು ಸಾಲಿಯಾನ್, ಕೋಶಾಧಿಕಾರಿ ಮುರಳೀಧರ ಪಾಲೆಂಜ, ಕಾರ್ಯದರ್ಶಿ ಮುರಳೀಧರ ಶೆಟ್ಟಿಗಾರ್,ಪಂ.ಸದಸ್ಯರಾದ ಸುಧೀರ್ ಕುಮಾರ್ ಎಂ.ಎಸ್., ಪ್ರೇಮಚಂದ್ರ ಕೆ,ದಿನಕರ್,ಜಯಪ್ರಸಾದ್ ಶೆಟ್ಟಿಗಾರ್,ಗಂಗಾಧರ ಸಾಲ್ಯಾನ್,ಕೇಶವ ರಾವ್ ನೆಕ್ಕಿಲು, ದರ್ಣಪ್ಪ ಗೌಡ, ಕರುಣಾಕರ ಶಿಶಿಲ, ಪ್ರಭಾಕರ ಶೆಟ್ಟಿಗಾರ್, ನೀತಾ, ಮಂಜುಳಾ ಕಾರಂತ್, ವಿಠಲ ಗೌಡ ಮುಂತಾದವರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ವೃಷಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರ್ವಹಿಸಿದರು