ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳು ಸವಣೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರಮಥ ಎಮ್ ಭಟ್ ,10ನೇ ತರಗತಿ(ಮೈತ್ರಿ ಎಲೆಕ್ಟ್ರಿಕಲ್ಸ್ ನ ಮಾಲಕ ರವಿನಾರಾಯಣ ಎಂ ಹಾಗೂ ಶರಾವತೀ ದಂಪತಿ ಪುತ್ರ), ಮೊಹಮ್ಮದ್ ರಿಹಾನ್, 10ನೇ ತರಗತಿ(ಅಬ್ದುಲ್ ರಝಾಕ್ ಮತ್ತು ಶ್ರೀಮತಿ ನಸೀಮಾ ಬಾನು ದಂಪತಿ ಪುತ್ರ), ಮತ್ತು ವಿಶಾಲ್, 10ನೇ ತರಗತಿ( ವಿಠಲ.ಪಿ ಮತ್ತು ಶ್ರೀಮತಿ ರೇಷ್ಮಾ ದಂಪತಿ ಪುತ್ರ) ಹಾಗೂ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ 6ನೇ ತರಗತಿಯ ಅಭಿಜ್ಞಾ ಶಾಂಭವಿ( ಸುಧೀರ್.ಬಿ.ಎಸ್ ಮತ್ತು ಲತಾ ದಂಪತಿ ಪುತ್ರಿ ) ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ 9ನೇ ತರಗತಿಯ ನೂತನ್( ಲಕ್ಷ್ಮೀನಾರಾಯಣ.ಪಿ ಮತ್ತು ಶ್ರೀಮತಿ ಹೇಮಲತಾ.ಕೆ ದಂಪತಿ ಪುತ್ರ) ಹಾಗೂ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ 6ನೇ ತರಗತಿಯ ಮಹತಿ(ಶಿವರಂಜನ್.ಎಂ ಮತ್ತು ಲಾವಣ್ಯ ಭಟ್ ದಂಪತಿ ಪುತ್ರಿ), 7ನೇ ತರಗತಿಯ ತನ್ವಿ.ಎನ್.ಎಂ (ನವೀನ ಶಂಕರ್.ಎಂ ಮತ್ತು ಶ್ರುತಿ.ಬಿ ದಂಪತಿ ಪುತ್ರಿ) ಹಾಗೂ 7ನೇ ತರಗತಿಯ ವರ್ಷಿ.ರೈ (ಶಶಿಧರ ರೈ ಮತ್ತು ರವಿಕಲಾ ರೈ ದಂಪತಿ ಪುತ್ರಿ) ದ್ವಿತೀಯ ಬಹುಮಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯಗುರುಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.