ಮಳೆಗಾಲದ ಸಮಯದಲ್ಲಿ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಕೊಳ್ಳುವಾಗ ಪರಿಶೀಲಿಸಿ ಖರೀದಿ ಮಾಡುವುದು ಉತ್ತಮ, ಅದರಲ್ಲೂ ಕೋಸು, ಹೂಕೋಸು, ಪಾಲಕ್ ಸೇರಿದಂತೆ ಸೊಪ್ಪು ತರಕಾರಿಗಳನ್ನು ಕೊಳ್ಳುವಾಗ ಹೆಚ್ಚಿನ ಜಾಗ್ರತೆ ವಹಿಸುವುದು ಸೂಕ್ತ.
ಇಲ್ಲೊಬ್ಬರು ಮಾರುಕಟ್ಟೆಯಲ್ಲಿ ಖರೀದಿಸಿದ ಹೂಕೋಸಿನಲ್ಲಿ ಸಣ್ಣ ಹಾವೊಂದು ಪ್ರತ್ಯಕ್ಷವಾಗಿದೆ, ಪದಾರ್ಥ ಮಾಡಲು ಹೂಕೋಸು ತೆಗೆದ ವೇಳೆ ಅದರೊಳಗೆ ಸಣ್ಣ ಹಾವು ಅವಿತು ಕುಳಿತಿರುವುದನ್ನು ಕಂಡು ಮಹಿಳೆ ಗಾಬರಿಗೊಂಡಿದ್ದಾರೆ.
ಸ್ವಲ್ಪ ಯಾಮಾರಿದರೂ ಇಬ್ಬರಿಗೂ ಅಪಾಯ ಖಚಿತ ಯಾಕೆಂದರೆ ತರಕಾರಿ ಕಟ್ ಮಾಡುವ ಭರದಲ್ಲಿ ಹರಿತವಾದ ಚಾಕುವಿನಿಂದ ಕಟ್ ಮಾಡುವ ವೇಳೆ ಎಲ್ಲಿಯಾದರೂ ಹಾವಿಗೆ ತಾಕಿದರೂ ತೊಂದರೆ ಅಲ್ಲದೆ ಹಾವೇ ನಮ್ಮ ಕೈಗೆ ಕಚ್ಚುವ ಸಂದರ್ಭವೂ ಹೆಚ್ಚು ಹಾಗಾಗಿ ನಮ್ಮ ಜಾಗ್ರತೆ ಮಾಡಿಕೊಳ್ಳುವುದು ಸೂಕ್ತ.
Which type of a Cauliflower is this?🙄🙄
— Devendra Saini (@dks6720) August 4, 2023
Cobra Cauliflower or Viper Cauliflower 🤔🤔#snake #CobraKai #Viper #vegetables pic.twitter.com/RyuFE85tYv
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ದೇವೇಂದ್ರ ಸೈನಿ ಎಂಬವರು ಶೇರ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ವ್ಯಕ್ತಿಯೊಬ್ಬರು ಮಾರುಕಟ್ಟೆಯಲ್ಲಿ ಖರೀದಿಸಿದ ಹೂಕೋಸನ್ನು ಪದಾರ್ಥ ಮಾಡಲು ಬಿಡಿಸಿದ ವೇಳೆ ಅದರೊಳಗೆ ಸಣ್ಣ ಹಾವು ಕಾಣಸಿಕ್ಕಿದೆ ಅಲ್ಲದೆ ಆ ಹಾವು ಹೂಕೋಸಿನ ಪದರಗಳಲ್ಲಿ ಸಲೀಸಾಗಿ ಅವಿತು ಕೂತಿರುವುದು ವಿಡಿಯೋದಲ್ಲಿ ಕಾಣಬಹುದು. ಹಾಗಾಗಿ ತರಕಾರಿ ಕೊಳ್ಳುವಾಗ ಎಚ್ಚರ ವಹಿಸುವುದು ಉತ್ತಮ.
NESARA|| WhatsApp ||GROUPS |
---|
💢ಜಾಹೀರಾತು💢