ಸಮಂತಾ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್..!!ತಲೆ ಕೆಡಿಸಿಕೊಂಡ ಫ್ಯಾನ್ಸ್

ಶೇರ್ ಮಾಡಿ

ಟಾಲಿವುಡ್ ನಟಿ ಸಮಂತಾ ಜೊತೆ ವಿಜಯ್ ದೇವರಕೊಂಡ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಸಮಂತಾ ನನ್ನ ಕ್ರಶ್ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದ ವಿಜಯ್, ಈಗ ನೆಚ್ಚಿನ ನಟಿ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಇಬ್ಬರ ಲವ್- ರೊಮ್ಯಾನ್ಸ್ ನೋಡಿ ರಶ್ಮಿಕಾ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ವಿಜಯ್- ರಶ್ಮಿಕಾ ಲವ್ವಿ ಡವ್ವಿ ಸ್ಟೋರಿ ನಡೆಯುತ್ತಿತ್ತು. ಈಗ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಸಮಂತಾ ನನ್ನ ಕ್ರಶ್, ನನ್ನ ನೆಚ್ಚಿನ ನಟಿ ಎಂದು ‘ಖುಷಿ’ ಸಿನಿಮಾ ಟ್ರೈಲರ್ ಇವೆಂಟ್‌ನಲ್ಲಿ ವಿಜಯ್ ವರಸೆ ಬದಲಿಸಿದ್ದರು. ಈಗ ಅದು ನಿಜ ಎಂಬುದನ್ನ ಹೈದರಾಬಾದ್‌ನಲ್ಲಿ ನಡೆದ ಖುಷಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪ್ರೂವ್ ಮಾಡಿದ್ದಾರೆ. ವೇದಿಕೆಯಲ್ಲಿ ಸಮಂತಾರನ್ನು ವಿಜಯ್ ಮುದ್ದಾಡಿದ್ದಾರೆ.
ವೇದಿಕೆಯಲ್ಲಿ ನೃತ್ಯಕ್ಕೂ ಮುನ್ನ ವಿಜಯ್ ದೇವರಕೊಂಡ ಅವರು ತಮ್ಮ ಶರ್ಟ್ ಅನ್ನು ತೆಗೆದು ಕೇವಲ ಬನಿಯನ್‌ನಲ್ಲಿ ಮಿಂಚಿದರು. ಹೀಗಾಗುತ್ತಿದ್ದಂತೆಯೇ ಶಿಳ್ಳೆಗಳ ಸುರಿಮಳೆಯಾಗಿದೆ. ನಂತರ ವಿಜಯ್ ಅವರು, ಸಮಂತಾರನ್ನು ಎತ್ತುಕೊಂಡು ಗರಗರನೆ ತಿರುಗಿದರು. ನಂತರ ಇವರಿಬ್ಬರ ರೊಮ್ಯಾನ್ಸ್ ಮುಂದುವರೆಯಿತು. ಕೆಲವರು ವಿಜಯ್ ಅವರ ಡ್ರೆಸ್ಸಿಂಗ್ ಬಗ್ಗೆ ಕಾಮೆಂಟ್ ಮಾಡುತ್ತಿದ್ದರೆ, ಸಮಂತಾ ಈ ನೃತ್ಯದಲ್ಲಿ ತೊಡಗಿಸಿಕೊಂಡಿರುವ ಪರಿಗೆ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ. ಇಬ್ಬರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ‌ ಈಗ ಸದ್ದು ಮಾಡುತ್ತಿದೆ.
ಆರೋಗ್ಯ ವಿಚಾರವಾಗಿ ಸಮಂತಾ ಸಿನಿಮಾಗಳಿಂದ ದೂರವಿದ್ರು. ಆದರೆ ವಿಜಯ್ ಒಬ್ಬರೇ ಖುಷಿ ಸಿನಿಮಾಗೆ ಪ್ರಚಾರ ಮಾಡ್ತಿರೋದು ನೋಡಿ ಸ್ಯಾಮ್ ಕೂಡ ಸಾಥ್ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಬರೋಬ್ಬರಿ ಮೂರು ಬಗೆಯ ಡ್ರೆಸ್ ಚೇಂಜ್ ಮಾಡಿ ಮಿಂಚಿದ್ದಾರೆ. ಸಮಂತಾ ಸಖತ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಮಂತಾ ಜೊತೆಗಿನ ವಿಜಯ್‌ ಸಲುಗೆ ನೋಡಿ, ರಶ್ಮಿಕಾ ಕಥೆ ಮುಂದೇನು ಅಂತಾ ಫ್ಯಾನ್ಸ್ ತಲೆಬಿಸಿ ಮಾಡಿಕೊಂಡಿದ್ದಾರೆ.
ವಿಜಯ್-‌ ಸಮಂತಾ ನಟನೆಯ ಖುಷಿ ಸಿನಿಮಾ ಇದೇ ಸೆಪ್ಟೆಂಬರ್‌ 1ಕ್ಕೆ ಬಹುಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ದಾಂಪತ್ಯ ಬದುಕಿನ ಸುಂದರ ಕಥೆಯನ್ನ ಹೇಳೋಕೆ ಖುಷಿ ಸಿನಿಮಾದ ಜೋಡಿ ರೆಡಿಯಾಗಿದ್ದಾರೆ.

NESARA|| WhatsApp ||GROUPS

   
                          

 

  
                                                     

 

💢ಜಾಹೀರಾತು💢

 

Leave a Reply

error: Content is protected !!