ಹತ್ಯಡ್ಕ: ಕಪಿಲ ಕೇಸರಿ ವತಿಯಿಂದ ಧನಸಂಗ್ರಹ, ಹಸ್ತಾಂತರ

ಶೇರ್ ಮಾಡಿ

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದಲ್ಲಿ ಮುದ್ದಿಗೆ, ಕುಂಟಾಲಪಳಿಕೆ, ಕಳೆಂಜವನ್ನು ಕೊಕ್ಕಡಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಸುದೆಗಂಡಿ ಎಂಬಲ್ಲಿ ಕಪಿಲಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿರುರಸ್ತೆಯ ದುರಸ್ತಿ ಕಾರ್ಯ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಊರ ಪರವೂರ ದಾನಿಗಳಿಂದ, ವಿವಿಧ ಸಂಘಟನೆಗಳಿಂದ ಧನಸಹಾಯವನ್ನು ಯಾಚಿಸಲಾಯಿತು. ಕಪಿಲ ಕೇಸರಿ ಯುವಕ ಮಂಡಲ, ಕುಂಟಾಲಪಳಿಕೆ ಇದರ ಕಾರ್ಯಕರ್ತರು ಯುವಕ ಮಂಡಲದ ಸದಸ್ಯರುಗಳಿಂದ ಹಾಗೂ ಊರ ದಾನಿಗಳಿಂದ ಸಂಗ್ರಹಿಸಿದ 25,360 ರೂ. ಮೊತ್ತವನ್ನು ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಗೌಡ ಬೊಳ್ಳೋಡಿ ಇವರ ಮುಂದಾಳತ್ವದಲ್ಲಿ ಸೇತುವೆ ದುರಸ್ತಿ ಕಾರ್ಯ ಸಮಿತಿ ಕಾರ್ಯದರ್ಶಿ ಪ್ರಶಾಂತ ಹೆಬ್ಬಾರ್ ಅವರಿಗೆ ಹಸ್ತಾಂತರಿಸಿದರು. ಯುವಕ ಮಂಡಲದ ಕಾರ್ಯದರ್ಶಿ ಸುಮಂತ್ ಗೌಡ, ಉಪಾಧ್ಯಕ್ಷ ಹರಿಪ್ರಸಾದ್ ಗೌಡ ಹಾಗೂ ಸದಸ್ಯ ಜಿತೇಂದ್ರ ಹೆಬ್ಬಾರ್ ಉಪಸ್ಥಿತರಿದ್ದರು.

NESARA|| WhatsApp ||GROUPS

                             

 

                                                       

 

💢ಜಾಹೀರಾತು💢

 

Leave a Reply

error: Content is protected !!