ನೇಸರ ಜ26:ಗಣರಾಜ್ಯೋತ್ಸವದ ಶುಭಾಶಯಗಳು
ಜನವರಿ 26 ಸ್ವತಂತ್ರ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನ. ಭಾರತಾಂಬೆ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಂಧಮುಕ್ತವಾದ ನಂತರದ ಅಪೂರ್ವ ದಿನಗಳಲ್ಲಿ ಜನವರಿ 26 ಕೂಡಾ ಒಂದು.
ಜನವರಿ 26, 1950ರಂದು ಭಾರತದ ಪರಮ ಪವಿತ್ರ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದಿತ್ತು. ಈ ಸುದಿನವನ್ನು ಪ್ರತಿವರ್ಷ ಗಣರಾಜ್ಯೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತದೆ. ಇದು ಹೊಸವರ್ಷದ ಮೊದಲ ರಾಷ್ಟ್ರೀಯ ಹಬ್ಬವೂ ಹೌದು.
ಸ್ವಾತಂತ್ರ್ಯ ಸಿಕ್ಕ ಖುಷಿಯ ಬಳಿಕ ಇಡೀ ರಾಷ್ಟ್ರ ಸಂಭ್ರಮಿಸಿದ ಮತ್ತೊಂದು ಕ್ಷಣ ಎಂದರೆ ಅದು 1950ರ ಜನವರಿ 26. ಅತ್ಯಂತ ಸಂಭ್ರಮದಿಂದ ಇಂದಿಗೂ ಭಾರತ ಈ ದಿನವನ್ನು ಆಚರಿಸುತ್ತದೆ.
ಗಣರಾಜ್ಯೋತ್ಸವ ಹೊಸವರ್ಷದ ಮೊದಲ ರಾಷ್ಟ್ರೀಯ ಹಬ್ಬ. ಈ ದಿನ ಇಡೀ ದೇಶದಲ್ಲಿಯೇ ಸಂಭ್ರಮ ಮನೆ ಮಾಡಿರುತ್ತದೆ.