ಡಿವೈಎಫ್ಐ ಜಿಲ್ಲೆಯಲ್ಲಿ ಜನಚಳುವಳಿಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ರಕ್ತದಾನ ಶಿಬಿರ ಹಾಗೂ ವೈಯುಕ್ತಿಕವಾಗಿ ರಕ್ತದಾನಗಳನ್ನು ನಿರಂತರ ಮಾಡುತ್ತಿದೆ, ಜೊತೆಗೆ ಯುವಕರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ರಕ್ತದಾನಿಗಳ ಕೊರತೆ ಇದೆ ಇದನ್ನು ನೀಗಿಸುವಲ್ಲಿ ಯುವಜನತೆ ಶ್ರಮಿಸಬೇಕಾಗಿದೆ. ರೋಗಿಗಳಿಗೆ ನೀಡಿದ ರಕ್ತಕ್ಕೆ ಬದಲಿ ರಕ್ತ ನೀಡಲೇಬೇಕೆಂಬ ನಿಯಮಗಳು ಇಲ್ಲದಿದ್ದರೂ ಖಾಸಗಿ ಆಸ್ಪತ್ರೆಗಳು ಬಡರೋಗಿಗಳನ್ನು ಸತಾಯಿಸುತ್ತವೆ ಇಂತಹ ಘಟನೆಗಳಿಂದ ರೋಗಿಗಳ ಕುಟುಂಬಸ್ಥರಿಗೂ ತೊಂದರೆಯಾಗುತ್ತಿದೆ. ಇಂತಹ ಹಲವಾರು ರೋಗಿಗಳ ಕುಂಟುಂಬಸ್ಥರಿಗೆ ನಿರಂತರ ಡಿವೈಎಫ್ಐ ಸ್ಪಂದಿಸುತ್ತಿದೆ ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದರು.
ಮಂಗಳೂರಿನಲ್ಲಿ 2024 ರ ಫೆಬ್ರವರಿ ತಿಂಗಳ 25,26,27 ರಂದು ನಡೆಯುವ DYFI ಕರ್ನಾಟಕ ರಾಜ್ಯ ಸಮ್ಮೇಳನದ ಪ್ರಚಾರಾರ್ಥವಾಗಿ ಡಿವೈಎಫ್ಐ ಪಂಜಿಮೊಗರು ಘಟಕ ನೇತೃತ್ವದಲ್ಲಿ ಭಾರತೀಯ ರೆಡ್‌ಕ್ರಾಸ್ ರಕ್ತ ನಿಧಿ, ದ.ಕ ಮತ್ತು ಲಯನ್ಸ್ ಕ್ಲಬ್ ಮಂಗಳೂರು, ನೇತ್ರಾವತಿ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವು ದ.ಕ.ಜಿ.ಪಂ. ಹಿರಿಯ ಪ್ರಾರ್ಥಮಿಕ ಶಾಲೆ ಪಂಜಿಮೊಗರು ಇಲ್ಲಿ ನಡೆಯಿತು.
ರಕ್ತದಾನ ಶಿಬಿರದಲ್ಲಿ ಏಳು ಯುವತಿಯರೂ ಸೇರಿದಂತೆ 50ಕ್ಕೂ ಅಧಿಕ ರಕ್ತದಾನಿಗಳು ಭಾಗವಹಿಸಿದ್ದರು. ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಇದರ ಅಧ್ಯಕ್ಷರಾದ ಚಂದ್ರಕಲಾ, ಪಂಜಿಮೊಗರು ಶಾಲೆ ಎಸ್‌ಡಿಎಂಸಿ ಅಧ್ಯಕ್ಷರಾದ ದಯಾನಂದ ಶೆಟ್ಟಿ ಶಿಬಿರದ ಉದ್ಘಾಟಿಸಿ ಮಾತನಾಡಿದರು. ನವಚೇತನ ಹೆಲ್ತ್ ಟ್ರಸ್ಟ್, ಪಂಜಿಮೊಗರು ಇದರ ಅಧ್ಯಕ್ಷರಾದ ಶ್ರೀ ಸುಕುಮಾರ್ , ಸಾಮಾಜಿಕ ಮುಂದಾಳುಗಳಾದ ಲೈಸಿ ಪಂಜಿಮೊಗರು, ಕನಕದಾಸ್ ಕೂಳೂರು , ರೆಡ್ ಕ್ರಾಸ್‌ನ ಪ್ರವೀಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿಬಿರದಲ್ಲಿ ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಶ್ರೀಮತಿ ಸುಮತಿ, ಡಿವೈಎಫ್ಐ ಪಂಜಿಮೊಗರು ಘಟಕದ ಮುಖಂಡರುಗಳಾದ ಅನಿಲ್ ಡಿಸೋಜ, ಮುಸ್ತಾಫಾ, ನೌಶಾದ್, ಖಲೀಲ್, ಹನುಮಂತ, ಸೌಮ್ಯ, ಕಸ್ತೂರಿ, ಸ್ಟೀವನ್, ಸರಿತ, ವಿನಿಶಾ, ಸ್ವಾತಿ, ರವಿ, ಬಶೀರ್ ಮುಂತಾದವರು ಉಪಸ್ಥಿತರಿದ್ದರು.
ಸಂತೋಷ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು, ಚರಣ್ ಶೆಟ್ಟಿ ಧನ್ಯವಾದ ಅರ್ಪಿಸಿದರು.