ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕಡಬ ತಾಲೂಕಿನ ನೆಲ್ಯಾಡಿ ವಲಯದ ಕಾರ್ಯಕ್ಷೇತ್ರದಲ್ಲಿ ಹೈನುಗಾರಿಕೆ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ಕೃಷಿ ಮೇಲ್ವಿಚಾರಕರಾದ ಸೋಮೇಶ ಅವರು ಯೋಜನೆಯಿಂದ ಅನುಷ್ಠಾನ ಮಾಡುತ್ತಿರುವ ಎಲ್ಲಾ ಕಾರ್ಯಕ್ರಮಗಳ ಕುರಿತು ಮತ್ತು ಅನುದಾನಗಳ ಬಗ್ಗೆ ಮಾಹಿತಿ ನೀಡಿ ಸದಸ್ಯರು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಹೇಳಿದ್ದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಕಡಬ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಜಯಚಂದ್ರ ರೈ ಕೊಂಟೋಡಿ ಅವರು ಹಸುಗಳಲ್ಲಿರುವ ತಳಿಗಳು, ಉತ್ತಮ ತಳಿ ಆಯ್ಕೆ, ಆಹಾರ ಪದ್ಧತಿ, ಹಸುಗಳ ಕೊಟ್ಟಿಗೆ ಸ್ವಚ್ಛತೆ ಮತ್ತು ನಿರ್ವಹಣೆ, ಹಸುಗಳ ಗರ್ಭಧಾರಣೆ, ಪಶು ಸಂಗೋಪನೆ ಇಲಾಖೆಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ರೋಗನಿರೋಧಕ ಲಸಿಕೆಯನ್ನು ಹಾಕಿಸುವಂತೆ ಮತ್ತು ಇಲಾಖೆಯಿಂದ ಹಸುಗಳಿಗೆ ವಿಮೆ ಮಾಡಿಸುವಂತೆ ಮಾಹಿತಿಯನ್ನು ನೀಡಿದರು.
ಪ್ರಗತಿ ಬಂದು ಮತ್ತು ಸ್ವಸಹಾಯ ಸಂಘದ ಸದಸ್ಯರಿಗೆ ಸಂಪೂರ್ಣವಾಗಿ ಲಾಭದಾಯಕ ಹೈನುಗಾರಿಕೆ ಕುರಿತು ಮಾಹಿತಿ ನೀಡಿದರು ಮತ್ತು ಗೊಬ್ಬರ ಗ್ಯಾಸ್ ನಿಂದ ಆಗುವ ಲಾಭದ ಬಗ್ಗೆ ತಿಳಿಸಿದರು.ವಲಯದ ಮೇಲ್ವಿಚಾಕರಾದ ವಿಜೇಶ್ ಜೈನ್ ರವರು ಮಹಿಳಾ ವಿಚಾರಗೋಷ್ಠಿ ಬಗ್ಗೆ ತಿಳಿಸಿ ಎಲ್ಲಾ ಸಂಘದ ಸದಸ್ಯರಿಂದ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಒಕ್ಕೂಟದ ಅಧ್ಯಕ್ಷರು ಭಾಸ್ಕರ್ ಶೆಟ್ಟಿ,,ಪದಾಧಿಕಾರಿಗಳು, ಸೇವಾಪ್ರತಿನಿಧಿ ಹೇಮಾವತಿ ಉಪಸ್ಥಿತರಿದ್ದರು.
ಎಲ್ಲಾ ಸದಸ್ಯರು ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದರು.