
ನೆಲ್ಯಾಡಿ: ನೆಲ್ಯಾಡಿಯ ಎಲೈಟ್ ಒಳಾōಗಣ ಕೋರ್ಟ್ ನಲ್ಲಿ ಡಿ.20ರಂದು ನೆಲ್ಯಾಡಿಯ ಪ್ರತಿ ಭಾವಂತ ಕ್ರಿಕೆಟ್ ಆಟಗಾರರ ಎಮಿರೇಟ್ಸ್ ಕ್ರಿಕೆಟ್ ಕ್ಲಬ್ ಇದರ ಜೆರ್ಸಿ ಅನಾವರಣ ಸಮಾರಂಭವು ವರ್ಣ ರಂಜಿತ ಸಮಾರಂಭದಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ನ ಧರ್ಮ ಗುರುಗಳಾದ ವಂದನಿಯ ಫಾ.ಶಾಜಿ ಮಾತ್ಯು ಇವರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ನೆಲ್ಯಾಡಿಯ ಸೌಹಾರ್ದ ವಾತಾವರಣಕ್ಕೆ ಕ್ರೀಡೆಯ ಕೊಡುಗೆ ಬಹು ದೊಡ್ಡ ದಾಗಿದ್ದು ಶಾಂತಿ, ಸಹಕಾರ ಪರಸ್ಪರ ವಿಶ್ವಾಸ ಬೆಳೆಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಹಾಗೆಯೇ ಯುವ ಜನರು ದುಶ್ಚಟಗಳಿಗೆ ಬಲಿಯಾಗದಂತೆ ತಡೆ ಯುವ ಶಕ್ತಿ ಕ್ರೀಡೆ ಗೆ ಇದೆ ಎಂದು ಧರ್ಮ ಗುರುಗಳು ಈ ಸಂದರ್ಭದಲ್ಲಿ ತಿಳಿಸಿದರು.ಎಲೈಟ್ ನ ಮಾಲೀಕರಾದ ಶಾಜಿ ವರ್ಗೀಸ್, ಶಿಬು ವರ್ಗೀಸ್, ಸಮಂತ್ ಕುಮಾರ್ ಬಸ್ತಿ, ಎಮಿರೇಟ್ಸ್ ತಂಡ ದ ಮಾಲೀಕರಾದ ಸಾದಿಕ್ ನೆಲ್ಯಾಡಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನವಾಸ್ ಕೋಲ್ಪೆ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.






