ನೇಸರ ಫೆ.10: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆಯು ವರ್ಚುವಲ್ ಮತ್ತು ವಾಸ್ತವ ವೇದಿಕೆಯ ಮೂಲಕ ಫೆ.20 ರಂದು ಬೆಳಿಗ್ಗೆ 11.00 ಗಂಟೆಗೆ ಶಿವಮೊಗ್ಗದ ಸಾಗರ ರಸ್ತೆಯ ದ್ವಾರಕ ಕನ್ವೆನ್ಷನ್ ಹಾಲ್ ನಲ್ಲಿ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿರವರ ಸಭಾಧ್ಯಕ್ಷತೆಯಲ್ಲಿ ಜರುಗಲಿದೆ.ಸಂಘದ 2012 ರ ಉಪವಿಧಿಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದ್ದು,ಉದ್ದೇಶಿತ ತಿದ್ದುಪಡಿ ಉಪವಿಧಿಗಳ ಸಂಪೂರ್ಣ ವಿವರಗಳನ್ನು ನೋಟೀಸ್ ನೊಂದಿಗೆ ಸದಸ್ಯರ ಮೊಬೈಲ್ ಗೆ ವಾಟ್ಸ್ ಆ್ಯಪ್ ಮೂಲಕ ಕಳುಹಿಸಲಾಗಿದ್ದು ಸರ್ವ ಸದಸ್ಯರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಸದರಿ ದಿನದಂದು ರಾಜ್ಯಾದ್ಯಂತ ಸರ್ಕಾರಿ ನೌಕರರು ಮುಕ್ತವಾಗಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದು http://us02web.zoom.us/j/81805162152 ಲಿಂಕ್ ಬಳಸಿ ಭಾಗವಹಿಸಬಹುದಾಗಿದೆ ಹಾಗೂ ಸಂಘದ ಫೇಸ್ ಬುಕ್ ಖಾತೆ http://www.Facebook.com/ksgeaofficial/ ಅಥವಾ http://www.Facebook.com/ksgeabng/ ನಲ್ಲಿಯೂ ಈ ವಿಶೇಷ ಮಹಾಸಭೆಯನ್ನು ವೀಕ್ಷಿಸಬಹುದಾಗಿದೆ. ಆ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಸಮಸ್ತ ಸರ್ಕಾರಿ ನೌಕರರು ಸದರಿ ಸಭೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಕಡಬ,ಇದರ ತಾಲೂಕು ಅಧ್ಯಕ್ಷರಾದ ವಿಮಲ್ ನೆಲ್ಯಾಡಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.