ನೇಸರ ಫೆ.10:ಕಡಬ ತಾಲೂಕಿನ ಬಲ್ಯ ಗ್ರಾಮದ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಫೆ.9 ಹಾಗೂ ಫೆ.10 ರಂದು ನಿಶ್ವಯಿಸಿದ್ದು, ಫೆ.9ರಂದು ಬೆಳಿಗ್ಗೆ ಗ್ರಾಮಸ್ಥರಿಂದ ಹಾಗೂ ಭಕ್ತಾಧಿಗಳಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ಉಮಾಮಹೇಶ್ವರಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ.ಚಿತ್ತರಂಜನ್ ರೈ ಮಾಣಿಗ,ಕಾರ್ಯದರ್ಶಿ ನಾರಾಯಣ ಗೌಡ ಕೊಲ್ಲಿಮಾರು, ಕೋಶಾಧಿಕಾರಿ ರಾಜಾರಾಂ ಭಟ್ ಹೊಸ್ಮಠ, ಸದಸ್ಯರಾದ ಸತೀಶ್ವಂದ್ರ ಶೆಟ್ಟಿ ಬೀರುಕ್ಕು ತನಿಯ ಸಂಪಡ್ಕ, ಕೃಷ್ಣಪ್ಪ ದೇವಾಡಿಗ ಸನಿಲ, ಚಂದ್ರಹಾಸ ಸಾಲ್ಯಾನ್ ಗೋವಿಂದಕಟ್ಟೆ, ರಾಮಯ್ಯ ಗೌಡ ಬೈಲಡ್ಯೆ ಉತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ಗುಂಡಿಜಾಲು ಕಾರ್ಯದರ್ಶಿ ರಾಮಕೃಷ್ಣ ಗೌಡ ಪನ್ಯಾಡಿ ಉಪಾಧ್ಯಕ್ಷ ಭಾಸ್ಕರ ಸನಿಲ ಗೌರವ ಸಲಹೆಗಾರ ಡಾ.ಸುರೇಶ್ ಕುಮಾರ್ ಕೂಡೂರು ಪ್ರಧಾನ ಆರ್ಚಕರು ರವಿ ಪ್ರಸಾದ್ ಭಟ್ ಸೇರಿದಂತೆ ಸರ್ವಸದಸ್ಯರು,ಬೈಲುವಾರು ಪ್ರತಿನಿಧಿಗಳು ಹಾಗೂ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.ಸಂಜೆ ಗ್ರಾಮಸ್ಥರಿಂದ ಕಾಣಿಕೆ ಹುಂಡಿನಿಧಿ ಸಮರ್ಪಣೆ ಬಳಿಕ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಫೆ.10 ರಂದು ದೇವಳದಲ್ಲಿ ಗಣಪತಿ ಹೋಮ ಬಿಂಬ ಶುದ್ಧಿ ಸಾನಿಧ್ಯ ಕಲಶ ಪೂಜೆ ಪಂಚಾಮೃತ ಅಭಿಷೇಕ ನಡೆದು ನಾಗ ದೇವರು ಹಾಗೂ ಪರಿವಾರ ದೈವಗಳ ವರ್ಷಾವಧಿ ತಂಬಿಲ ನಡೆಯಲಿದೆ .ಸಂಜೆ ಚೆಂಡೆವಾದನ ದೀಪಾರಾಧನೆ ನಡೆದು ರಾತ್ರಿ ದೇವಿಗೆ ವಿಶೇಷ ಮಹಾಪೂಜೆ ನಡೆಯಲಿದೆ .ರಾತ್ರಿ ಶ್ರೀ ಭೂತಬಲಿ ನೃತ್ಯ ಬಲಿ ಉತ್ಸವ ರಾಜಾಂಗಣ ಪ್ರಸಾದ ಬಟ್ಟಲು ಕಾಣಿಕೆ ಮಂತ್ರಾಕ್ಷತೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ


GOOGLE MAP
—ಜಾಹೀರಾತು—




