ಉಪ್ಪಿನಂಗಡಿ: ಜೇಸಿಐ ಘಟಕದ ಪುನಶ್ಚೇತನ ತರಬೇತಿ

ಶೇರ್ ಮಾಡಿ

ನೇಸರ ಫೆ.10: ಜೇಸಿಐ ಉಪ್ಪಿನಂಗಡಿ ಘಟಕದ ವತಿಯಿಂದ “ಹುತಾತ್ಮ ದಿನಾಚರಣೆ” ಅಂಗವಾಗಿ ಮಹಾತ್ಮ ಗಾಂಧೀಜಿಯ ಕುರಿತು ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ.ಮೋಹನಚಂದ್ರ ತೋಟದಮನೆ ಅಧ್ಯಕ್ಷತೆ ವಹಿಸಿ,ಸ್ವಾಗತಿಸಿದರು.

ಜೇಸಿಐ ಎಂದರೇನು? ಅದರ ಪ್ರಾರಂಭ,ಯಾವಾಗ,ಎಲ್ಲಿ,ಯಾರಿಂದ? ಜೇಸಿಯಲ್ಲಿ ನಮ್ಮ ಜವಾಬ್ದಾರಿ ಏನು?ಸದಸ್ಯರು ಪಡೆಯವ ಪ್ರಯೋಜನ ಕುರಿತು ಪುನಶ್ಚೇತನ ತರಬೇತಿ ಕಾರ್ಯಾಗಾರ ಉಪ್ಪಿನಂಗಡಿ ರೋಟರಿ ಭವನದಲ್ಲಿ ವಲಯ ತರಬೇತುದಾರು ಹಾಗೂ ಘಟಕದ ಪೂರ್ವಾಧ್ಯಕ್ಷರಾದ ಜೇಸಿಐ.ರವೀಂದ್ರ ದರ್ಬೆಯವರು ನಡೆಸಿಕೊಟ್ಟರು.

ನೆಲ್ಯಾಡಿ ಜೇಸಿಐ 2022ನೇ ಸಾಲಿನ ಪದಗ್ರಹಣ ಸಮಾರಂಭ

ನಿಕಟಪೂರ್ವ ಅಧ್ಯಕ್ಷ ಜೇಸಿ.ಕೆ.ವಿ.ಕುಲಾಲ್, ರೋಟರಿ ಕ್ಲಬ್ ನ ಅಧ್ಯಕ್ಷ ಜೇಸಿ.ನೀರಜ್ ಕುಮಾರ್, ಪೂರ್ವಾಧ್ಯಕ್ಷರುಗಳಾದ ಪ್ರಶಾಂತ್ ಕುಮಾರ್.ರೈ, ಮಧುರ ಮೋಟರ್ಸ್ ಡ್ರೈವಿಂಗ್ ಸ್ಕೂಲ್ ಶಿಕ್ಷಕ ಆನಂದ ರಾಮಕುಂಜ, ಶಶಿಧರ್ ನೆಕ್ಕಿಲಾಡಿ,ಉಪಾಧ್ಯಕ್ಷ ಕುಶಾಲಪ್ಪ,ಕೋಶಧಿಕಾರಿ ಸುರೇಶ್,ಸದಸ್ಯರಾದ ದಿವಾಕರ ಶಾಂತಿನಗರ, ಪುರುಷೋತ್ತಮ ತೋಟದ ಮನೆ, ಪುನೀತ್ ಮಂಜಿಪಲ್ಲ,ಮಹೇಶ್ ಖಂಡಿಗ,ಜೇಜೇಸಿ ಪ್ರತೀಕ್ಷಾ,ಲಿಖಿತಾ , ವಸಂತ ನೆಕ್ಕರೆ ,ರವಿಉಪಸ್ಥಿತರಿದ್ದರು.
ಅಜೇಯ್ ಪದಕ ಜೇಸಿ ವಾಣಿ ವಾಚಿಸಿದರು.ಕಾರ್ಯದರ್ಶಿ ಲವೀನಾ ಪಿಂಟೊರವರು ವಂದಿಸಿದರು.

 

—ಜಾಹೀರಾತು—

Leave a Reply

error: Content is protected !!