ನ್ಯಾಷನಲ್ ಬೋರ್ಡ್ ಆಫ್ ಕಂಪ್ಯೂಟರ್ ಎಜುಕೇಶನ್ ಅಧೀನದ ಐಕಾನ್ ಕ್ವಾಲಿಟಿ ಆಫ್ ಎಜುಕೇಶನ್ ಸಂಸ್ಥೆ ಶುಭಾರಂಭ

ಶೇರ್ ಮಾಡಿ

ನೇಸರ ಫೆ.10: ನ್ಯಾಷನಲ್ ಬೋರ್ಡ್ ಆಫ್ ಕಂಪ್ಯೂಟರ್ ಎಜುಕೇಶನ್ ಅಧೀನದ ಐಕಾನ್ ಕ್ವಾಲಿಟಿ ಆಫ್ ಎಜುಕೇಶನ್ ಸಂಸ್ಥೆಯು ಉಜಿರೆಯ ಎ. ಎಂ. ಟವರ್ ನ ಎರಡನೇ ಮಹಡಿಯಲ್ಲಿ ಫೆ.10 ರಂದು ಶುಭಾರಂಭಗೊಂಡಿತು.

ಸಂಸ್ಥೆಯನ್ನು ಸ.ಪ್ರ.ದ.ಕಾಲೇಜು ಬೆಳ್ತಂಗಡಿ ಇದರ ನಿವೃತ್ತ ಪ್ರಾಂಶುಪಾಲರಾದ ಡಾ ಆಂಟೋನಿ.ಟಿ.ಪಿ ರವರು ಉದ್ಘಾಟಿಸಿದರು,ಬಳಿಕ ಮಾತನಾಡಿದ ಅವರು ಭಾರತದ ಯುವ ಸಂಪತ್ತನ್ನು,ಮಾನವ ಸಂಪತ್ತನ್ನು ಬಳಸಿಕೊಳ್ಳಲು,ಜೀವನ ಕೌಶಲ್ಯ ತರಬೇತಿ ಅತ್ಯಂತ ಸಹಕಾರಿಯಾಗುತ್ತದೆ.ಪ್ರಧಾನಮಂತ್ರಿಯವರ ಸ್ಕಿಲ್ ಇಂಡಿಯಾ ಯೋಜನೆಗೆ ಇಂತಹ ಸಂಸ್ಥೆಗಳು ವರದಾನವಾಗಲಿದೆ ಎಂದರು.

ಗಣಕಯಂತ್ರಗಳಿಗೆ ಎಸ್.ಡಿ.ಎಂ ಉಜಿರೆ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಂತೋಷ್ ಇವರು ಚಾಲನೆ ನೀಡಿ ಮಾತನಾಡಿದ ಅವರು ಯುವಕರು ಈ ನಾಡಿನ ಸಂಪತ್ತಾಗಿದ್ದು ಭಾರತದ ಭವಿಷ್ಯತ್ತಿಗೆ ಯುವಸಮೂಹದ ಕೌಶಲ್ಯವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪುಷ್ಪಾವತಿ ಶೆಟ್ಟಿ, ಬೆಳ್ತಂಗಡಿ ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಪದ್ಮಕುಮಾರ್, ಕಟ್ಟಡ ಮಾಲಕರಾದ ಮಹಮ್ಮದ್ ಕುಂಞ ಹಾಜಿ ಹಾಗೂ ಸಂಸ್ಥೆಯ ಸಂತೋಷ್ ಕುಲಾಲ್,ಮಹಮ್ಮದ್ ಸಿನಾನ್,ಶ್ವೇತಾ.ಜಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಮಾಲಕರಾದ ಮಹಮ್ಮದ್ ಸಿನಾನ್ ಸ್ವಾಗತಿಸಿದರು.

—ಜಾಹೀರಾತು—

Leave a Reply

error: Content is protected !!