ಆರಾಧ್ಯ.ಎ.ರೈ ಗೆ – “ಯೋಗ ಕಲಾ ಪ್ರತಿಭಾ” ಪ್ರಶಸ್ತಿ

ಮನೆಮನೆ ಯಕ್ಷಗಾನ: ವೀಕ್ಷಿಸಿ, Subscribers ಮಾಡಿ

ನೇಸರ ಫೆ.15: ನಿರಂತರ ಯೋಗ ಕೇಂದ್ರ ಸುಳ್ಯದ ವಿದ್ಯಾರ್ಥಿನಿ ಆರಾಧ್ಯ.ಎ.ರೈ ಇವರು ಅಂಡಮಾನ್ ಮತ್ತು ನಿಕೋಬರ್ ದ್ವೀಪದ ಆರ್.ಜಿ.ಟಿ ಪಬ್ಲಿಕ್ ವಿದ್ಯಾಲಯದಲ್ಲಿ ಆನ್ಲೈನ್ ಮೂಲಕ ನಡೆದ 6ನೇ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ 8 ರಿಂದ 10ರ ವಯೋಮಿತಿಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೆಯೇ 11ನೇ “ಯೋಗೋತ್ಸವ -2022 ” ಶಿವಜ್ಯೋತಿ ಯೋಗ ಕೇಂದ್ರ(ರಿ.)ಬೆಂಗಳೂರು ಇವರು ನಡೆಸಿದ 11ರ ವಯೋಮಿತಿಯ ವಿಭಾಗ ದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಮತ್ತು 11ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಯೋಗ ಪಟುಗಳಿಗೆ ಮತ್ತು ಯೋಗ ಶಿಕ್ಷಕರಿಗೆ ನಡೆಸಿದ ಯೋಗ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ “ಯೋಗ ಕಲಾ ಪ್ರತಿಭಾ” ಪ್ರಶಸ್ತಿ ಪಡೆದು ಕೊಂಡರು. ಇವರು ಜ್ಞಾನೋದಯ ಬೆಥನಿ ಆಂಗ್ಲ ಮಾಧ್ಯಮ ಶಾಲೆ ನೆಲ್ಯಾಡಿಯ 2ನೇ ತರಗತಿ ವಿದ್ಯಾರ್ಥಿನಿ. ಯೋಗ ತರಬೇತಿಯನ್ನು ಶರತ್ ಮರ್ಗಿಲಡ್ಕ ಇವರಲ್ಲಿ ಪಡೆಯುತ್ತಿದ್ದಾರೆ. ಪುತ್ತೂರು ತೊಟ್ಲಾ ನಿವಾಸಿ ಅವಿನಾಶ್ ರೈ ಹಾಗೂ ಸಂಧ್ಯಾ ರೈ ದಂಪತಿ ಪುತ್ರಿ.

—ಜಾಹೀರಾತು—

Leave a Reply

error: Content is protected !!