ನೇಸರ ಫೆ.15: ಕೊಕ್ಕಡ ಮತ್ತು ಅರಸಿನಮಕ್ಕಿ ನಡುವೆ ಪುತ್ತಿಗೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜೀಪು ಪಲ್ಟಿಯಾದ ಘಟನೆ ಫೆ.14 ರಂದು ರಾತ್ರಿ ನಡೆದಿದ್ದು, ಜೀಪಿನಲ್ಲಿದ್ದ ಹಲವಾರು ಮಂದಿಗೆ ತೀವ್ರ ಗಾಯವಾಗಿದೆ.
ಅರಸಿನಮಕ್ಕಿಯಲ್ಲಿ ನಡೆಯುವ ನೇಮೋತ್ಸವಕ್ಕೆಂದು ಕಡಬದ ಕೊಣಾಜೆಯಿಂದ ಕುಟುಂಬವೊಂದು ಜೀಪಿನಲ್ಲಿ ತೆರಳುತ್ತಿದ್ದ ವೇಳೆ ಪುತ್ತಿಗೆ ತಲುಪುತ್ತಿದ್ದಂತೆ ತಿರುವಿನಲ್ಲಿ ಚಾಲಕನ ಹತೋಟಿ ತಪ್ಪಿ ಜೀಪು ಪಲ್ಟಿಯಾಗಿದೆ. ಜೀಪಿನಲ್ಲಿದ್ದವರ ಪೈಕಿ ಮೂವರು ಮಕ್ಕಳು, ವೃದ್ದೆ ಸೇರಿದಂತೆ ಏಳು ಮಂದಿಗೆ ಗಾಯವಾಗಿದ್ದು, ಅವರನ್ನು ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯೋಗೀಶ್ ಅಲಂಬಿಲ,ಸ್ಥಳೀಯರಾದ ವಿನಯ್ ಹಾರ,ರಂಜು ಕೊಕ್ಕಡ,ಸುರೇಶ್,ರವಿ ಮುದ್ದಿಗೆ ಇವರುಗಳ ಸಹಕಾರದಿಂದ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಗಾಯಾಳುಗಳನ್ನು 108 ಆ್ಯಂಬುಲೆನ್ಸ್ ಮತ್ತು ಮಾರತಿ ವ್ಯಾನ್ ನಲ್ಲಿ ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕಳಿಸಿ ಕೊಡಲಾಯಿತು. ಅಪಘಾತದಿಂದ ಗಾಯಗೊಂಡ ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ತೀವ್ರ ಗಾಯಗೊಂಡ ವೃದ್ದೆ ಮತ್ತು ಮಕ್ಕಳನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
—ಜಾಹೀರಾತು—